ಬೀದರ್: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡ ಬೀದರ್ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ನಗರದ ಚಿದ್ರಿ ರಿಂಗ್ ರೋಡ್ನಲ್ಲಿ ನಿರ್ಮಾಣವಾದ ಟರ್ಮಿನಲ್ ಉದ್ಘಾಟಿಸಿದ ಬಿಎಸ್ವೈ, ಜನರು ರಾಜ್ಯ ರಾಜಧಾನಿಯಿಂದ ಬೀದರ್‌ಗೆ ಬರಬೇಕು ಅಂದ್ರೆ ಹೈದ್ರಾಬಾದ್ ಮೂಲಕ ಅಥವಾ ರೈಲಿನ ಮೂಲಕವೇ ಪ್ರಯಾಣ ಮಾಡಬೇಕಾಗಿತ್ತು. ಇದರಿಂದ ಸುಮಾರು 14 ಗಂಟೆಗಳ ಕಾಲ ಪ್ರಯಾಸದ ಪ್ರಯಾಣವಾಗುತ್ತಿತ್ತು. ಈಗ ವಿಮಾನ ಹಾರಾಟ ಆಗುತ್ತಿರುವುದರಿಂದ ಬೆಂಗಳೂರು-ಬೀದರ್ ಅಂತರ ಕೇವಲ 1.30 ಗಂಟೆಯ ಪ್ರಯಾಣವಷ್ಟೇ ಆಗಲಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೂ ಹೊಸ ಆಯಾಮ ಸಿಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ್, ರಾಜಶೇಖರ್ ಪಾಟಿಲ, ಬಿ.ನಾರಾಯಣರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.