ETV Bharat / state

ಬೀದರ್​ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್​​... ಕೊನೆ ಕ್ಷಣದ ತಯಾರಿ ವೀಕ್ಷಿಸಿದ ಸಚಿವರ ಟೀಂ - ಬೀದರ್ ಸುದ್ದಿ

ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಬೀದರ್ ನಾಗರೀಕ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಜ್ಜಾಗಿದ್ದು, ಫೆಬ್ರುವರಿ 7ರಂದು ಮುಹೂರ್ತ ಫಿಕ್ಸ್ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​, ಸಂಸದ ಭಗವಂತ ಖೂಬಾ ಅವರ ತಂಡ ಕೊನೆ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ್ರು.

Bidar Airport inauguration on Feb 7th .
ಫೆ.7ಕ್ಕೆ ಬೀದರ್​ ವಿಮಾನ ನಿಲ್ದಾಣ ಲೋಕಾರ್ಪಣೆ..ಕೊನೆ ಕ್ಷಣದ ತಯಾರಿ ವಿಕ್ಷಿಸಿದ ಸಚಿವರ ಟೀಂ...!
author img

By

Published : Feb 5, 2020, 3:46 PM IST

ಬೀದರ್: ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಬೀದರ್ ನಾಗರೀಕ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಫೆಬ್ರುವರಿ 7ರಂದು ಮುಹೂರ್ತ ನಿಗದಿ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​, ಸಂಸದ ಭಗವಂತ ಖೂಬಾ ಅವರ ತಡಂ ಕೊನೆ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ್ರು.

ಫೆ.7ಕ್ಕೆ ಬೀದರ್​ ವಿಮಾನ ನಿಲ್ದಾಣ ಲೋಕಾರ್ಪಣೆ... ಕೊನೆ ಕ್ಷಣದ ತಯಾರಿ ವೀಕ್ಷಿಸಿದ ಸಚಿವರ ಟೀಂ

ನಗರದ ಚಿದ್ರಿ ಹೊರವಲಯದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ ಕಾಮಗಾರಿಯ ಅಂತಿಮ ಹಂತದ ಕೆಲಸವನ್ನು ವೀಕ್ಷಿಸಿದ ಸಚಿವ ಪ್ರಭು ಚವ್ಹಾಣ್​, ವಿಮಾನಯಾನ ಆರಂಭಕ್ಕೆ ಎರಡೇ ದಿನ ಬಾಕಿಯಿದೆ. ಬಾಕಿ ಉಳಿದಿರುವ ಸಣ್ಣಪುಟ್ಟ ಕೆಲಸವನ್ನ ಹಗಲು-ರಾತ್ರಿ ಎನ್ನದೆ ಮಾಡಿ ಮುಗಿಸುವಂತೆ ಗುತ್ತಿಗೆದಾರ ಗುರುನಾಥ್ ಕೊಳ್ಳೂರ್​ ಅವರಿಗೆ ಸೂಚಿಸಿದ್ರು.

ಫೆ. 7ರಂದು ಸಿ ಎಂ ಬಿ.ಎಸ್​. ಯಡಿಯೂರಪ್ಪ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುತ್ತಿದ್ದು, ಪೆಂಡಾಲ್, ಪೂಜೆ ಮಾಡಲು ಸ್ಥಳ, ಪಾರ್ಕಿಂಗ್ ಹಾಗೂ ಕೇಂದ್ರ ಹಾಗೂ ರಾಜ್ಯ ನಾಯಕರ ಸ್ವಾಗತಕ್ಕಾಗಿ ಸಕಲ ಸಿದ್ಧತೆಗಳನ್ನ ಪೂರ್ಣಗೊಳಿಸುವಂತೆ ಹೇಳಿದ್ರು. ಈ ವೇಳೆ ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ಡಾ.ಹೆಚ್.ಆರ್ ಮಹದೇವ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.