ETV Bharat / state

ಕೊರೊನಾ ಸೋಂಕಿನಿಂದ 30 ಮಂದಿ ಮುಕ್ತ: ಆಸ್ಪತ್ರೆಯಿಂದ ಬಿಡುಗಡೆ

author img

By

Published : Jul 18, 2020, 8:19 AM IST

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ವಿವಿಧ ಗ್ರಾಮಗಳ 15 ಜನರು ಕೊರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆ ನಗರದ ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.

Bidar: 30 corona cured discharges from hospital
ಕೊರೊನಾ ಸೋಂಕಿನಿಂದ ಮುಕ್ತರಾದ 30 ಜನರಿಗೆ ಆಸ್ಪತ್ರೆಯಿಂದ ಬಿಡುಗಡೆ ಭಾಗ್ಯ...

ಬಸವಕಲ್ಯಾಣ(ಬೀದರ್​): ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 30 ಜನ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡವರನ್ನು ಪುಷ್ಪ ವೃಷ್ಟಿ ಮೂಲಕ ಸ್ವಾಗತಿಸಲಾಯಿತು.

ಕೊರೊನಾ ಸೋಂಕಿನಿಂದ ಮುಕ್ತರಾದ 30 ಜನರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ

ಕೆಲ ದಿನಗಳ ಹಿಂದೆ ಸೋಂಕಿಗೆ ಒಳಗಾದ ನಗರದ 15 ಜನ ಸೋಂಕಿತರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ 15 ಜನರು ಸೋಂಕಿನಿಂದ ಗುಣಮುಖರಾದ ಹಿನ್ನೆಲೆ ನಗರದ ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಈ ವೇಳೆ ಆಸ್ಪತ್ರೆಯಿಂದ ಬಿಡುಗಡೆಯಾದವರು ಮಾತನಾಡಿ, ಕೊರೊನಾ ಸೋಂಕು ಧೃಡಪಡುವ ಜನರು ಭಯಪಡುವ ಅಗತ್ಯವಿಲ್ಲ. ಯಾವುದೇ ಒಂದು ಚಿಕ್ಕ ಸಮಸ್ಯೆ ಇಲ್ಲದೇ ನಾವು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಹೊರ ಬಂದಿದ್ದೇವೆ. ಆಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿ ಆಸ್ಪತ್ರೆ ವೈದ್ಯರು, ನರ್ಸ್ ಗಳು ಹಾಗೂ ಸಿಬ್ಬಂದಿಗಳೆಲ್ಲರೂ ನಮ್ಮನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಅನುಭವ ಹಂಚಿಕೊಂಡರು.

ಬಾರದ ಲ್ಯಾಬ್ ವರದಿ- ಕಿಟ್ ಗಳ ಮೂಲಕ ಪರೀಕ್ಷೆ: ಆಸ್ಪತ್ರೆಗೆ ದಾಖಲಾಗಿದ್ದ 31 ಜನ ಸೋಂಕಿತರ ಪೈಕಿ 15 ಜನರು ಸಂಪೂರ್ಣ ಗುಣಮುಖರಾದ ಬಗ್ಗೆ ಲ್ಯಾಬ್ ನಿಂದ ನೆಗೆಟಿವ್ ವರದಿ ಬಂದ ಕಾರಣ ಮಧ್ಯಾಹ್ನದ ವೇಳೆಯೇ 15 ಜನರನ್ನು ಬಿಡುಗಡೆ ಮಾಡಲಾಯಿತು. ಆದರೆ, ಉಳಿದ 16 ಜನ ಸೋಂಕಿತರ ವರದಿ ಬಾರದ ಕಾರಣ ಅವರನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು.

ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಸದಸ್ಯ ಗಫಾರಪೇಶ್ಮಾಮ್ ಸೇರಿದಂತೆ ಕೆಲ ಪ್ರಮುಖರು ಮಾತನಾಡಿ, ಸೋಂಕಿತರು ಈಗಾಗಲೇ 14 ದಿನಗಳಿಗಿಂತಲೂ ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಆದರೆ, ಅವರ ವರದಿ ಬಂದಿಲ್ಲ ಎನ್ನುವ ಕಾರಣ ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಯಾವುದೇ ಲಕ್ಷಣಗಳು ಹೊಂದಿಲ್ಲದ ಸೋಂಕಿತರನ್ನು 10 ದಿನಗಳಲ್ಲಿಯೇ ಬಿಡುಗಡೆ ಮಾಡಬೇಕು ಎನ್ನುವ ನಿಯಮವಿದೆ. ಆದರೂ ಇಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಮೇಲಧಿಕಾರಿಗಳನ್ನು ಸಂಪರ್ಕಿಸಿದ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಅಪರ್ಣಾ ಮಹಾನಂದ್ ಅವರು, ಅಧಿಕಾರಿಗಳ ನಿರ್ದೇಶನದಂತೆ ಆಸ್ಪತ್ರೆಯಲ್ಲಿದ್ದ 15 ಜನರನ್ನು ಕಿಟ್​ಗಳ ಮೂಲಕ ಆ್ಯಂಟಿಜನ್ ಟೆಸ್ಟ್ (ರ್ಯಾಪೀಡ್ ಟೆಸ್ಟ್) ನಡೆಸಿ ಬಿಡುಗಡೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.