ETV Bharat / state

ದೊರೆಸ್ವಾಮಿ ಅವರ ಬಗ್ಗೆ ಗೌರವ ಇದೆ, ಆದ್ರೂ ದೇಶದ್ರೋಹಿಗಳ ಜೊತೆ ಸೇರಿರುವುದು ಸರಿಯಲ್ಲ: ಖೂಬಾ

ಬೀದರ್​ನಲ್ಲಿ ಮಾತನಾಡಿರುವ ಸಂಸದ ಭಗವಂತ ಖೂಬಾ, ರಾಹುಲ್​ ಗಾಂಧಿ, ದೇವೇಗೌಡ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

author img

By

Published : Mar 1, 2020, 6:28 PM IST

Bhagavantha Khuba
ಸಂಸದ ಭಗವಂತ ಖೂಬಾ

ಬೀದರ್: ಪ್ರಧಾನಿ ನರೇಂದ್ರ ಮೊದಿ ವಿರುದ್ಧ ಸಿದ್ದರಾಮಯ್ಯನವರು ಮಾತನಾಡಿರುವುದು ಹೊಸದೆನಲ್ಲ. ಸೊನಿಯಾ ಗಾಂಧಿಯವರ ಕಾಲದಿಂದಲೂ ಮೋದಿ ಟೀಕೆ ಮಾಡುತ್ತಾ ಬಂದಿದ್ದಾರೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಸಂಸದ ಭಗವಂತ ಖೂಬಾ

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಏನು ಸೋನಿಯಾ ಗಾಂಧಿಯವರು ಮೋದಿ ವಿರುದ್ಧ ಮೌತ್​ ಕಾ ಸೌದಾ ಗರ್​ ಎಂದು ಹೇಳಿದ್ದನ್ನು ಕೇಳಿದ್ದೇವೆ. ಅದನ್ನೆ ಈಗ ಸಿದ್ದರಾಮಯ್ಯ ಪುನರುಚ್ಚಿರಿಸಿದ್ದಾರೆ ಅಷ್ಟೇ ಎಂದರು.

ದೊರೆಸ್ವಾಮಿಯವರು ಸ್ವಾತಂತ್ರ ಹೋರಾಟಗಾರರು, ಅವರ ವಯಸ್ಸಿಗೆ ನಾವು ಗೌರವ ಕೊಡುತ್ತೇವೆ. ಆದರೆ ದೇಶದ್ರೋಹಿಗಳ ಜೊತೆ ಸೇರಿಕೊಂಡು ದೇಶದ ವಿರುದ್ಧವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಅಂತವರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿಯಲ್ಲ. ಯುವ ಪೀಳಿಗೆಯ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿರುವ ಕುರಿತು ಪತ್ರಿಕೆಗಳು ವರದಿ ಮಾಡಿರುವುದನ್ನು ನಾವು ನೋಡಿದ್ದೇವೆ ಎಂದು ಗುಡುಗಿದರು.

ಮಾಜಿ ಪ್ರಧಾನಿ ದೇವೆಗೌಡರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಪರವಾಗಿ ನಿಂತುಕೊಂಡಿದ್ದು, ತಮ್ಮ ನೈತಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ. ಅನವಶ್ಯಕವಾಗಿ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ಪ್ರತಿಭಟನೆ ನಡೆಯಲು ಜೆಡಿಎಸ್​​, ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳ ನಾಯಕರ ಪ್ರಚೋದನೆಯ ಭಾಷಣವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರು ತಿಂಗಳಲ್ಲಿ ಜನರು ದೊಣ್ಣೆ ತಗೊಂಡು ರೋಡಿಗೆ ಬರ್ತಾರೆ ಅಂತಾರೆ, ಅಸಾದುದ್ದೀನ್ ಓವೈಸಿ, 15 ಕೋಟಿ ಮುಸ್ಲಿಮರು 100 ಕೋಟಿ ಹಿಂದೂಗಳಿಗಿಂತ ಹೆಚ್ಚು ಅಂತಾರೆ ಹೀಗೆ ಪ್ರಚೋದನಕಾರಿ ಮಾತನಾಡುವ ನಾಯಕರ ಭಾಷಣದಿಂದಲೆ ದೇಶದಲ್ಲಿ ಶಾಂತಿ ಭಂಗವಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.