ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಸರಗಳ್ಳರನ್ನು ಬಂಧಿಸಿದ್ದು, ಅವರಿಂದ 34.67 ಗ್ರಾಂ ಚಿನ್ನದ ಸರ ವಶ ಪಡಿಸಿಕೊಂಡಿದ್ದಾರೆ.
ಕಲಕೇರಿ ಗ್ರಾಮದ ಶರಣಪ್ಪ ಸಿದ್ದಪ್ಪ ಕತ್ತಿ(27), ನಾಸೀರ್ ಅಹ್ಮದ ಪೀರಸಾಬ್ ಪಟೇಲ್ ಉರ್ಫ್ ಬಿರಾದಾರ(27) ಬಂಧಿತ ಆರೋಪಿಗಳು. ಬಸವನ ಬಾಗೇವಾಡಿ ಸಿಪಿಐ ಸೋಮಶೇಖರ ಜಿ. ಜುಟ್ಟಲ್, ಪಿಎಸ್ಐ ಚಂದ್ರಶೇಖರ ವೈ. ಹೆರಕಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಅ.3 ರಂದು ಬಸವನ ಬಾಗೇವಾಡಿ ಪಟ್ಟಣದ ಐಡಿಎಐಬಿ ಬ್ಯಾಂಕ್ ಹತ್ತಿರ ಸರಗಳ್ಳತನ ಪ್ರಕರಣ ನಡೆದಿತ್ತು. ಅಂಗನವಾಡಿ ಕಾರ್ಯಕರ್ತೆ ಕಮಲಾ ಶಿವಪ್ಪ ರತ್ತಳ್ಳಿ ಎಂಬವರ ಸರ ಕಳವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮಾ ಅಗ್ರವಾಲ ಮಾಹಿತಿ ನೀಡಿದ್ದಾರೆ.