ಬಸವಕಲ್ಯಾಣ (ಬೀದರ್): ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ಮತ್ತೆ 5 ಜನರಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಐನೂರರ ಗಡಿ ದಾಟಿದೆ.
ನಗರದ 55 ವರ್ಷದ ಪುರುಷ, 20 ವರ್ಷದ ಯುವತಿ ಹಾಗೂ ತಾಲೂಕಿನ ಯರಂಡಗಿ ಗ್ರಾಮದ 60 ವರ್ಷದ ವೃದ್ಧ, ಘೋಟಾಳ ಗ್ರಾಮದ 50 ವರ್ಷದ ಪುರುಷ, ಆಲಗೂಡ ಗ್ರಾಮದ 65 ವರ್ಷದ ವೃದ್ಧನಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 512ಕ್ಕೆ ದಾಟಿದೆ. ಈ ಪೈಕಿ 450ಕ್ಕೂ ಅಧಿಕ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 20ಕ್ಕೂ ಅಧಿಕ ಜನ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಯಿಂದ ಒಂದಂಕಿಗೆ ಇಳಿದಿದ್ದು, ಜನತೆಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿದ ತಾಲೂಕು ಎನ್ನುವ ಕಳಂಕ ಹೊಂದಿದ ಬಸವಕಲ್ಯಾಣ ತಾಲೂಕು ಈಗ ಜಿಲ್ಲೆಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.