ಬಸವಕಲ್ಯಾಣ: ಬೈಕ್ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕೋಹಿನೂರ ಹಾಗೂ ವಿ.ಕೆ. ಸಲಗರ ಗ್ರಾಮದ ಮಧ್ಯೆ ನಡೆದಿದೆ.
ತಾಲೂಕಿನ ಮಂಠಾಳ ಗ್ರಾಮದ ಮೊಹಮ್ಮದ್ ನಜೀಮೋದ್ದೀನ್ ಗೌಸೋದ್ದೀನ್ ಶೇಖ್ (26) ಮೃತ ಯುವಕ. ವಿದೇಶದಿಂದ ಆಗಮಿಸಿದ್ದ ಗೆಳೆಯನನ್ನು ಭೇಟಿ ಮಾಡಲೆಂದು ಭಾನುವಾರ ಸಂಜೆ ವಿ.ಕೆ. ಸಲಗರ ಗ್ರಾಮಕ್ಕೆ ತೆರಳಿ ಗೆಳೆಯನೊಂದಿಗೆ ಮಾತನಾಡಿ ಮರಳಿ ಗ್ರಾಮಕ್ಕೆ ಹಿಂದಿರುಗುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಸೇತುವೆ ಕೆಳಗೆ ಬಿದ್ದು ಈ ಅವಗಡ ಸಂಭವಿಸಿದೆ. ಈ ಕುರಿತು ನರೋಣಾ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.