ಬೀದರ್: ಜಿಲ್ಲೆಯ ಔರಾದ್ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆದಿದ್ದು, ಬಿಜೆಪಿ ಸರಳ ಬಹುಮತದಿಂದ ಅಧಿಕಾರಕ್ಕೆ ಬಂದಿದೆ.
ಅಧ್ಯಕ್ಷೆಯಾಗಿ ಅಂಬಿಕಾ ಕೆರಬಾ ಪವಾರ ಉಪಾಧ್ಯಕ್ಷರಾಗಿ ಸಂತೋಷ ಪೋಕಲವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 20 ಜನ ಸದಸ್ಯ ಬಲದ ಪಂಚಾಯತನಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ಪಡೆದಿತ್ತು. ಕಾಂಗ್ರೆಸ್ವ 06 ಹಾಗೂ ಪಕ್ಷೇತರ 2 ಜನ ಸದಸ್ಯರು ಇದ್ದರು.
ಇಂದು ನಡೆದ ಚುನಾವಣೆಯಲ್ಲಿ ಪಕ್ಷೇತರದ ಅಭ್ಯರ್ಥಿ ದಯಾನಂದ ಘೂಳೆ ಅವರ ಬಾಹ್ಯ ಬೆಂಬಲ ಪಡೆದ ಬಿಜೆಪಿ ಒಟ್ಟು 13 ಜನ ಸದಸ್ಯ ಬಲದೊಂದಿದೆ ಅವಿರೋಧವಾಗಿ ಅಧಿಕಾರಕ್ಕೆ ಬಂದಿದೆ.
ಈ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಪಂಚಾಯತ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಸಬೇಕು. ಚುನಾವಣೆ ಆದ ಮೇಲೆ ಎರಡು ವರ್ಷಗಳ ಕಾಲ ವಿಳಂಬವಾಗಿ ಆಡಳಿತ ಮಂಡಳಿ ರಚನೆಯಾಗಿದ್ದು, ಈ ಎರಡು ವರ್ಷದಲ್ಲಾದ ಅಭಿವೃದ್ಧಿ ಹಿನ್ನಡೆಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿ ತೊರಿಸುವಂತೆ ಸೂಚನೆ ನೀಡಿದರು.