ETV Bharat / state

ಹಿಡಿಯಲು ಹೋದ ಪೊಲೀಸರ ಮೇಲೆ ಕಳ್ಳರ ಹಲ್ಲೆ.. ಆರೋಪಿಗಳ ಮೇಲೆ ಗುಂಡಿನ ದಾಳಿ,ಬಂಧನ - ಸಾರ್ವಜನಿಕರ ಮುಂದೆ ನಕಲಿ ಪೊಲೀಸರ ವೇಷದಲ್ಲಿ ಸುತ್ತಾಡಿ ಯಾಮಾರಿಸುತ್ತಿದ್ದ ಇರಾನಿ ಗ್ಯಾಂಗ್​

ಹುಮನಾಬಾದ್ ಪಟ್ಟಣದ ಹೊರ ವಲಯದಲ್ಲಿ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ರವಿಕುಮಾರ್ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಕಿರಣ, ಸಿಬ್ಬಂದಿ ಭಗವಾನ್ ಹಾಗೂ ನವಿನ್ ಎಂಬುವರು ಕಳ್ಳರನ್ನು ಹಿಡಿಯಲು ಮುಂದಾದರು..

Arrest of thieves in bidar
ಆರೋಪಿಗಳ ಮೇಲೆ ಗುಂಡಿನ ದಾಳಿ
author img

By

Published : Nov 29, 2020, 10:21 PM IST

ಬೀದರ್ : ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಸಾರ್ವಜನಿಕರ ಮುಂದೆ ನಕಲಿ ಪೊಲೀಸರ ವೇಷದಲ್ಲಿ ಸುತ್ತಾಡಿ ಯಾಮಾರಿಸುತ್ತಿದ್ದ ಇರಾನಿ ಗ್ಯಾಂಗ್​ನ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದಕ್ಕೆ ಪಿಎಸ್‌ಐ ರವಿಕುಮಾರ್ ಅವರು ಮೂರು ರೌಂಡ್ ಗುಂಡು ಹಾರಿಸಿ ಆರೋಪಿಗಳನ್ನು ಬಲೆಗೆ ಬೀಳಿಸಿದ್ದಾರೆ.

ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರ ವಲಯದಲ್ಲಿ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ರವಿಕುಮಾರ್ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಕಿರಣ, ಸಿಬ್ಬಂದಿ ಭಗವಾನ್ ಹಾಗೂ ನವಿನ್ ಎಂಬುವರು ಕಳ್ಳರನ್ನು ಹಿಡಿಯಲು ಮುಂದಾದರು.

ಈ ವೇಳೆಯಲ್ಲಿ ಆರೋಪಿಗಳು ಹರಿತವಾದ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಯತ್ನ ಮಾಡಿ ಓಡಿ ಹೋಗಲು ಮುಂದಾಗಿದ್ದಾರೆ. ಪರಿಸ್ಥಿತಿ ಕೈಮೀರುವ ಹಂತಕ್ಕೂ ಮೊದಲು ಪಿಎಸ್‌ಐ ರವಿಕುಮಾರ್ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.