ETV Bharat / state

ವಿಶ್ವದ ಜ್ಞಾನಿಗಳಿಗೆ ಅಧ್ಯಯನ ಕೇಂದ್ರವಾಗಲಿ ಅನುಭವ ಮಂಟಪ: ನಳಿನ್‌ಕುಮಾರ ಕಟೀಲ್

ಅನುಭವ ಮಂಟಪಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ಅನುಭವ ಮಂಟಪದ ಆವರಣದಲ್ಲಿ ಮೊದಲು ಧ್ವಜಾರೋಹಣ ನೆರವೇರಿಸಿ, ನಂತರ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮಿಸಿದರು. ನಂತರ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಕಟೀಲ ಅವರಿಗೆ ವಚನ ಪಠಣ ಮಾಡಿಸಿದರು.

Nalinkumar Kateel
ನಳಿನ್‌ಕುಮಾರ ಕಟೀಲ್
author img

By

Published : Oct 19, 2020, 11:53 PM IST

ಬಸವಕಲ್ಯಾಣ: ಮಹಾ ಮಾನವತವಾದಿ ಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದಿಂದ ವಿಶ್ವಕ್ಕೆ ವಚನ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ನೀಡಿದ್ದಾರೆ. ವಿಶ್ವದ ಜ್ಞಾನಿಗಳಿಗೆ ಈ ಅನುಭವ ಮಂಟಪ ಅಧ್ಯಯನ ಕೇಂದ್ರವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ ಹೇಳಿದರು.

ವಿಶ್ವದ ಜ್ಞಾನಿಗಳಿಗೆ ಅಧ್ಯಯನ ಕೇಂದ್ರವಾಗಲಿ ಅನುಭವ ಮಂಟಪ: ನಳಿನ್‌ಕುಮಾರ ಕಟೀಲ್

ಇಲ್ಲಿಯ ಅನುಭವ ಮಂಟಪಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿಗೆ ಶ್ರೇಷ್ಠ ಸಂದೇಶ ಸಾರಿದ ಪುಣ್ಯಭೂಮಿ ಭಾರತ, ದೇಶದಲ್ಲಿ ಸಾಧು, ಸಚಿತರು, ಶರಣರು ಬಾಳಿದ ಪವಿತ್ರ ಭೂಮಿಯಾಗಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈ ಭಾಗದ ಹೈದ್ರಾಬಾದ್​ ಕರ್ನಾಟಕ ಎಂಬ ಹೆಸರು ತೆಗೆದು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದಾರೆ. ಈ ಭಾಗ ಅಷ್ಟೇ ಕಲ್ಯಾಣ ಕರ್ನಾಟಕ ಆಗದೇ ರಾಜ್ಯವೇ ಕಲ್ಯಾಣ ಆಗಬೇಕು ಅಂದಾಗ ಮಾತ್ರ ಅಂದಿನ ಶರಣರು ಕಂಡ ಕನಸು ನನಸಾಗಲು ಸಾಧ್ಯ. ಶರಣರ ನಾಡಿಗೆ ಬಿಜೆಪಿ ಸರ್ಕಾರ ಕೊಡುಗೆ ಅನನ್ಯವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಬಿಕೆಡಿಬಿಗೆ ಹೆಚ್ಚಿನ ಅನುದಾನ ಕಲ್ಪಿಸಲಾಗಿದೆ ಎಂದು ಸ್ಮರಿಸಿದ ಅವರು, ಅನುಭವ ಮಂಟಪ ಕೆಲಸವು ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.

ಅನುಭವ ಮಂಟಪ ಟ್ರಸ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಕೆಡಿಬಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಅನೇಕ ಶರಣರ ಸ್ಮಾರಕಗಳು ನಿರ್ಮಾಣಗೊಂಡಿವೆ. ಹೀಗಾಗಿ ಬಿಜೆಪಿ ಆಡಳಿತದ ಅವಧಿಯಲ್ಲಿ ಕಲ್ಯಾಣಕ್ಕೆ ರಾಜಾಶ್ರಯ ಸಿಕ್ಕಿದೆ ಎಂದರು.

ಮುಂಬರುವ ಫೆಬ್ರವರಿ ತಿಂಗಳ ಒಳಗಾಗಿ ನೂತನ ಅನುಭವ ಮಂಟಪದ ಅಡಿಗಲ್ಲು ಸಮಾರಂಭ ನೆರವೇರಿಸಲಾಗುವುದು. ಜತೆಗೆ ಕಲ್ಯಾಣ ಅಂತರಾಷ್ರ್ಟೀಯ ಪ್ರವಾಸಿ ಕೇಂದ್ರವಾಗಬೇಕು. ಈ ಸಂಬಂಧ ಸಂಬಂಧಪಟ್ಟವರ ಜೊತೆಗೆ ಚರ್ಚಿಸಿ ಸಹಕಾರ ನೀಡಬೇಕು ಎಂದು ಕಟೀಲ್ ಅವರಿಗೆ ಮನವಿ ಮಾಡಿದ ಶ್ರೀಗಳು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಬಸವಕಲ್ಯಾಣ ಪ್ರಗತಿ ಹೊಂದಿದೆ. ಸತ್ಯ ಮುಚ್ಚಿಡಬಾರದು ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖೂಬಾ, ಪ್ರಮುಖರಾದ ವೈಜಿನಾಥ ಕಾಮಶೆಟ್ಟಿ, ಡಿ.ಕೆ ಸಿದ್ರಾಮ, ಶಶೀಲ ನಮೋಶಿ, ಸೂರ್ಯಕಾಂತ ನಾಗಮಾರಪಳ್ಳಿ, ಸುಧೀರ ಕಾಡಾದಿ, ಅಶೋಕ ಹೊಕ್ರಾಣಿ, ಸಂಜಯ ಪಟವಾರಿ, ಪ್ರದೀಪ ವಾತಾಡೆ, ಶಂಕರ ನಾಗದೆ, ಅನೀಲ ಭೂಸಾರೆ, ಸೂರ್ಯಕಾಂತ ಚಿಲ್ಲಾಬಟ್ಟೆ, ದೀಪಕ ಗಾಯಕವಾಡ, ಈಶ್ವರಸಿಂಗ್ ಠಾಕೂರ, ಗುರುನಾಥ ಜಾಂತಿಕರ, ದತ್ತಾತ್ರೆಯ ತೂಗಾಂವಕರ, ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.