ಬೀದರ್ : ಬೆಳಗ್ಗೆ ಇಂದ ಸಚಿವ ಪ್ರಭು ಚೌಹಾಣ್ ಬೆಂಬಿಡದೆ ಕಾರ್ಯಕರ್ತರ ಜೊತೆ ಕಾರಿನಲ್ಲಿ ಹಿಂಬಾಲಿಸುತ್ತಿದ್ದ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಸಹಚರರ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ವಿಧಾನ ಪರಿಷತ್ ಚುನಾವಣೆ ಮತದಾನ ಹಿನ್ನೆಲೆ, ಸಚಿವ ಪ್ರಭು ಚೌಹಾಣ್ ಅವರ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಓಡಾಡುತ್ತಿದ್ದರು.
ಬೆಳಗ್ಗೆಯಿಂದ ಪ್ರಭು ಚೌಹಾಣ್ ಬೆನ್ನು ಬಿಡದೇ ಹಿಂದೆ ಬಿದ್ದಿದ್ದ ಭೀಮರಾವ್ ಪಾಟೀಲ್ ಜತೆ ಹತ್ತಾರು ವಾಹನಗಳಲ್ಲಿ ಕಾರ್ಯಕರ್ತರು ಹಿಂಬಾಲಿಸುತ್ತಿದ್ದರು.
ಔರಾದ್ ತಾಲೂಕಿನ ಚಿಮ್ಮೆಗಾಂವ್, ಮುರ್ಕಿ ಸೇರಿದಂತೆ ಹಲವು ಗ್ರಾಮಗಳಿಗೆ ಸಚಿವರು ಭೇಟಿ ನೀಡಿದರು. ಮುರ್ಕಿ ಗ್ರಾಮಕ್ಕೆ ಬಂದಾಗ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾತಿನ ಚಕಮಕಿ ನಡೆಯಿತು.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಎಎಸ್ಪಿ ಗೋಪಾಲ ಹಾಗೂ ಪೊಲೀಸರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜತೆ ಪರವಾನಿಗೆ ಇಲ್ಲದೇ ಓಡಾಡುತ್ತಿರುವ ವಾಹನಗಳಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.