ETV Bharat / state

ಕಾಡು ಹಂದಿಗಳ ದಾಳಿಗೆ ಎಕರೆಯಷ್ಟು ಕಬ್ಬು ಮಣ್ಣುಪಾಲು, ಲಕ್ಷಾಂತರ ರೂಪಾಯಿ ನಷ್ಟ - Basavakalyana in Bidar district

ಕಬ್ಬಿನ ಗದ್ದೆಗೆ ಕಾಡುಹಂದಿಗಳು ನುಗ್ಗಿ ದಾಳಿ ಮಾಡಿದ್ದು, ಸುಮಾರು 1 ಎಕರೆಯಷ್ಟು ಕಬ್ಬು ನಷ್ಟವಾದ ಘಟನೆ ಬಸವಕಲ್ಯಾಣ ತಾಲ್ಲೂಕಿನ ತಳಬೋಗ ಗ್ರಾಮದಲ್ಲಿ ನಡೆದಿದೆ..

Acres of sugar cane loss due to wild pigs attack
ಕಾಡು ಹಮದಿಗಳ ದಾಳಿಗೆ ಎಕರೆಯಷ್ಟು ಕಬ್ಬು ಮಣ್ಣುಪಾಲು: ಲಕ್ವಾಂತರ ರೂಪಾಯಿ ನಷ್ಟ
author img

By

Published : Jul 25, 2020, 3:33 PM IST

ಬಸವಕಲ್ಯಾಣ (ಬೀದರ್​) : ಬೆಳೆದು ನಿಂತ ಕಬ್ಬಿನ ಗದ್ದೆಗೆ ಕಾಡುಹಂದಿಗಳು ನುಗ್ಗಿ ದಾಳಿ ಮಾಡಿವೆ. ಸುಮಾರು 1 ಎಕರೆಯಷ್ಟು ಕಬ್ಬು ನಷ್ಟವಾದ ಘಟನೆ ತಾಲೂಕಿನ ತಳಬೋಗ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಶಿವಾಜಿ ಸೂರ್ಯವಂಶಿ ಅವರ ಜಮೀನಿನಲ್ಲಿ ದಾಳಿ ನಡೆಸಿದ ಕಾಡು ಹಂದಿಗಳು, ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬಿನ ಬೆಳೆ ನಷ್ಟ ಮಾಡಿವೆ.

ರಾತ್ರಿ ಸಮಯದಲ್ಲಿ ಗುಂಪು ಗುಂಪಾಗಿ ಹಠಾತ್ತನೆ ದಾಳಿ ನಡೆಸುವ ಈ ಕಾಡು ಹಂದಿಗಳು ಕಬ್ಬು ಸೇರಿ ಬಾಯಿಗೆ ಸಿಗುವ ಇತರೆ ಯಾವುದೇ ಬೆಳೆಗಳನ್ನು ಮನಬಂದಂತೆ ನಾಶ ಮಾಡುತ್ತಿವೆ.

ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಕ್ಷಾಂತರ ರೂಪಾಯಿ ಬೆಳೆ ಕಳೆದುಕೊಂಡ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.