ಬೀದರ್: ಭಗ್ನ ಪ್ರೇಮಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜಿಲ್ಲೆಯ ಕಮಲಮಗರ ತಾಲೂಕಿನ ಹಂದಿಖೇರಾ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಖೇರ್ಡಾ ಗ್ರಾಮದ ಗಜಾನಂದ ಅಂಬ್ರಿ (25) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಳೆದ 6 ವರ್ಷಗಳಿಂದ ಯುವತಿಯೊಬ್ಬಳನ್ನು ಈತ ಪ್ರೀತಿಸುತ್ತಿದ್ದ. ಬಳಿಕ ಅವಳಿಗೆ ಮದುವೆಯಾಗಿತ್ತು. ನಂತರವೂ ಈ ಇಬ್ಬರು ತಮ್ಮ ಪ್ರೀತಿ ಮುಂದುವರೆಸಿದ್ದರು. ಆದರೆ ಆಕೆಯ ಗಂಡನಿಗೆ ವಿಷಯ ತಿಳಿದ ಬಳಿಕ ಪರಿಸ್ಥಿತಿ ಮಿತಿಮೀರಿತ್ತು. ಇದರಿಂದ ಯುವಕ ಕಳೆದ ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಇದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಕುರಿತು ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.