ETV Bharat / state

ಸ್ಪೀಡ್ ಬ್ರೇಕರ್ ಸೃಷ್ಟಿಸಿದ ಅವಾಂತರ: ಬೈಕ್​ನಿಂದ ಬಿದ್ದು ಮಹಿಳೆ ಸಾವು

ಸ್ಪೀಡ್ ಬ್ರೇಕರ್ ಸೃಷ್ಟಿಸಿದ ಅವಾಂತರದಿಂದಾಗಿ ಬೈಕ್​ನಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೀದರ್​ ಜಿಲ್ಲೆಯಲ್ಲಿ ನಡೆದಿದೆ.

ಬೀದರ್​ ಅಪಘಾತ ಸುದ್ದಿ,
ಮಳೆಯಲ್ಲಿ ಸ್ಪೀಡ್ ಬ್ರೇಕರ್ ಸೃಷ್ಟಿಸಿದ ಅವಾಂತರ
author img

By

Published : Jul 25, 2020, 7:02 AM IST

ಬಸವಕಲ್ಯಾಣ (ಬೀದರ್​): ಮಳೆಯಲ್ಲಿ ಚಲಿಸುತ್ತಿರುವಾಗ ಬೈಕ್​ನಿಂದ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಇಲ್ಲಿನ ಮಿನಿ ವಿಧಾನಸೌಧದ ಬಳಿ ನಡೆದಿದೆ.

ಭಾಲ್ಕಿ ತಾಲೂಕಿನ ಖಟಕ ಚಿಂಚೋಳ ಗ್ರಾಮದ ಸವಿತಾ ಹನುಮಂತ ಮೇತ್ರೆ (40) ಮೃತ ಮಹಿಳೆ. ತನ್ನ ಮಗನ ಜೊತೆ ಬೈಕ್​​​​​ನಲ್ಲಿ ಹಿಂಬದಿ ಕುಳಿತು ತಾಲೂಕಿನ ಸಸ್ತಾಪೂರ ಗ್ರಾಮಕ್ಕೆ ಮಹಿಳೆ ತೆರಳುತ್ತಿದ್ದರು. ಮಳೆ ಹಿನ್ನೆಲೆ ರಸ್ತೆ ಮೇಲೆ ನಿಂತ ನೀರಿನಿಂದಾಗಿ ರಸ್ತೆ ಉಬ್ಬು( ಸ್ಪೀಡ್ ಬ್ರೇಕರ್ ) ಕಾಣಿಸದ ಕಾರಣ ಬೈಕ್ ಜಂಪ್ ಆಗಿದೆ. ವೇಗದಲ್ಲಿ ಬೈಕ್ ಜಂಪ್ ಆದ ಹಿನ್ನೆಲೆ ಹಿಂಬದಿ ಕುಳಿತಿದ್ದ ಮಹಿಳೆ ಜಾರಿ ಬಿದ್ದಿದ್ದಾರೆ.

ಬೀದರ್​ ಅಪಘಾತ ಸುದ್ದಿ,
ಮಳೆಯಲ್ಲಿ ಸ್ಪೀಡ್ ಬ್ರೇಕರ್ ಸೃಷ್ಟಿಸಿದ ಅವಾಂತರ

ಅಪಘಾತದಲ್ಲಿ ಮುಖ ಹಾಗೂ ತಲೆಗೆ ಪೆಟ್ಟಾಗಿದ್ದು, ಕೂಡಲೇ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದಾರೆ.

ಸಂಚಾರಿ ಠಾಣೆ ಪಿಎಸ್ಐ ನಂದಕುಮಾರ ಮುಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.