ETV Bharat / state

ಪಬ್ಜಿ ಆಡಬೇಡ ಎಂದಿದ್ದಕ್ಕೆ ಮನೆಯಲ್ಲಿಯೇ ನೇಣಿಗೆ ಶರಣಾದ ಮಗ - ಬಾಲಕ ಆತ್ಮಹತ್ಯೆ

ಮೊಬೈಲ್​​ನಲ್ಲಿ ಹೆಚ್ಚು ಹೊತ್ತು ಗೇಮ್ ಆಡಬೇಡ ಎಂದು ಪೋಷಕರು ಬುದ್ದಿಮಾತು ಹೇಳಿದ್ದಕ್ಕೆ ಕೋಪಗೊಂಡ ಬಾಲಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಿನದ ಬಹುಕಾಲ ಮೊಬೈಲ್​​​​ನಲ್ಲಿ ಗೇಮ್ ಆಡುತ್ತಿದ್ದ ಎಂಬ ಕಾರಣಕ್ಕೆ ತಂದೆ-ತಾಯಿ ಮಗನಿಗೆ ಬುದ್ದಿ ಹೇಳಿದ್ದರು. ಆದರೆ ಇದರಿಂದ ಕೋಪಗೊಂಡ ಮಗ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.

A son who committed suicide at home for don't play pubG request of parents
ಪಬ್ಜಿ ಆಡಬೇಡ ಎಂದಿದ್ದಕ್ಕೆ ಮನೆಯಲ್ಲಿಯೇ ನೇಣಿಗೆ ಶರಣಾದ ಮಗ
author img

By

Published : May 18, 2020, 9:26 PM IST

ಬಸವಕಲ್ಯಾಣ (ಬೀದರ್​​): ಮೊಬೈಲ್​​​​ನಲ್ಲಿ ಸದಾ ಪಬ್ಜಿ ಗೇಮ್ ಆಡುತಿದ್ದ ಬಾಲಕನಿಗೆ ಅದನ್ನ ಬಿಟ್ಟು ಬಿಡುವಂತೆ ಪೋಷಕರು ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಬಾಲಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲೂಕಿನ ರಾಜೇಶ್ವರ ಗ್ರಾಮದ ರಾಹುಲ ವಿಶ್ವನಾಥ ಗುತ್ತೇದಾರ (17) ಆತ್ಮಹತ್ಯೆಗೆ ಶರಣಾದ ಬಾಲಕ. ತಂದೆ, ತಾಯಿಗೆ ಒಬ್ಬನೇ ಪುತ್ರನಾಗಿರುವ ಈತ ಬಹುಕಾಲ ಮೊಬೈಲ್​​ನಲ್ಲಿ ಗೇಮ್ ಆಡುವುದರಲ್ಲಿಯೇ ಕಾಲ ಕಳೆಯುತ್ತಿದ್ದ. ಮಗನ ವರ್ತನೆಯಿಂದ ಬೇಸತ್ತ ಪಾಲಕರು ಮೊಬೈಲ್​​ನಿಂದ ದೂರ ಇರುವಂತೆ ಬೈದು ಬುದ್ದಿಮಾತು ಹೇಳಿದ್ದಾರೆ.

ಪಾಲಕರು ಹೇಳಿದ ಬುದ್ದಿ ಮಾತಿನಿಂದ ಕೋಪಗೊಂಡ ಬಾಲಕ ನೇರವಾಗಿ ಮನೆಯ ಕೋಣೆಯೊಂದರಲ್ಲಿ ಹೋಗಿ ಬೆಲ್ಟ್​​ನಿಂದ ನೇಣು ಬಿಗಿದುಕೊಂಡಿದ್ದಾನೆ. ತಕ್ಷಣ ಗಮನಿಸಿದ ಪಾಲಕರು ಆತನನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.