ಬಸವಕಲ್ಯಾಣ: ಮಾರಕ ಕೊರೊನಾ ಕಾಟ ಮುಂದುವರೆದಿದ್ದು, 2 ವರ್ಷದ ಮಗು ಸೇರಿ 8 ಜನರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
8 ಮಂದಿಯಲ್ಲಿ ಸೋಂಕು ದೃಢಪಡುವ ಮೂಲಕ ತಾಲೂಕಿನಲ್ಲಿ ಸೋಂಕು ಪೀಡಿತರ ಸಂಖ್ಯೆ 401ಕ್ಕೆ ಏರಿದೆ. ಮೌನೇಶ್ವರ ಕಾಲೋನಿಯ 2 ವರ್ಷದ ಮಗು, ಸರ್ವೋದಯ ಕಾಲೋನಿಯ 58 ವರ್ಷದ ವ್ಯಕ್ತಿ, ಲಾಲ್ ತಲಾಬ್ ಬಡಾವಣೆಯ 65 ವರ್ಷದ ವೃದ್ಧ, ಖಂಡಾಳ ಗ್ರಾಮದ 59, 32 ಹಾಗೂ 49 ವರ್ಷದ ಪುರುಷರು, ಬೇಲೂರ ಗ್ರಾಮದ 23 ವರ್ಷದ ಯುವಕ ಹಾಗೂ ರಾಜೋಳಾ ಗ್ರಾಮದ 28 ಯುವಕನಿಗೆ ಸೋಂಕು ತಗುಲಿದೆ.