ಬೀದರ್: ಜಿಲ್ಲೆಯಲ್ಲಿ ಕೊರೊನಾ ರೌದ್ರಾವತಾರ ಮುಂದುವರೆದಿದ್ದು ಜಿಲ್ಲೆಯಾದ್ಯಂತ ಇಂದು ಒಂದೇ ದಿನ 8 ಜನರು ಮೃತಪಟ್ಟಿರುವ ವರದಿಯಾಗಿದೆ. 102 ಜನರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ.
ಜಿಲ್ಲೆಯ ಔರಾದ್- 06, ಬಸವಕಲ್ಯಾಣ-31, ಭಾಲ್ಕಿ-09, ಬೀದರ್-45, ಹುಮನಾಬಾದ್-10 ಹಾಗೂ ಅನ್ಯರಾಜ್ಯದ ಒಬ್ಬರಲ್ಲಿ ಕೋವಿಡ್-19 ವೈರಾಣು ಸೋಂಕು ಪತ್ತೆಯಾಗಿದೆ. ಅಲ್ಲದೆ ಇಂದು ಕೊರೊನಾಗೆ ದಿನ 8 ಜನರು ಬಲಿಯಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3748 ಕ್ಕೆ ಏರಿಕೆಯಾಗಿದ್ದು 116 ಜನರು ಸಾವನ್ನಪ್ಪಿದ್ದಾರೆ. ಇಂದು 75 ಜನರು ಗುಣಮುಖರಾಗಿ ಮನೆಗೆ ವಾಪಸಾದರೆ ಇಲ್ಲಿಯವರೆಗೆ 2592 ಜನ ಸೋಂಕಿತರು ಗುಣಮುಖರಾಗಿದ್ದು ಇನ್ನೂ 1036 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.