ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ಸೋಂಕು ರೌದ್ರಾವತಾರ ತಾಳಿದೆ. ಇಂದು 73 ಜನರಲ್ಲಿ ಸೋಂಕು ಪತ್ತೆಯಾದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ ಮಹಾಮಾರಿ ಸೋಂಕು ಜಿಲ್ಲೆಯಲ್ಲಿ ಭೀಕರ ಸ್ವರೂಪ ಪಡೆದುಕೊಂಡಿದೆ.
ಬೀದರ್ ತಾಲೂಕಿನ ಬಗದಲ ಗ್ರಾಮದ 65 ವರ್ಷದ ವೃದ್ಧರೊಬ್ಬರು ಇಂದು ಸಾವಿಗೀಡಾಗಿದ್ದಾರೆ. ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಜೂನ್ 18ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಇವರಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿದೆ. ಅಲ್ಲದೆ ಕಲ್ಬುರ್ಗಿ ನಗರದ ಬಸವೇಶ್ವರ ಕಾಲೋನಿಯ 51 ವರ್ಷದ ಮಹಿಳೆಯೊಬ್ಬರು ಜೂನ್ 17ರಂದು ಉಸಿರಾಟದ ಸಮಸ್ಯೆಯಿಂದ ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 19ರಂದು ಮೃತಪಟ್ಟಿದ್ದ ಮಹಿಳೆಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ.
ಜಿಲ್ಲೆಯ ಚಿಟಗುಪ್ಪ ಪಟ್ಟಣದ ಕಟೈನ್ಮೆಂಟ್ ಏರಿಯಾದ 28 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೀದರ್ ನಗರದ ಅಂಬೇಡ್ಕರ್ ವೃತ್ತದ ಬಡಾವಣೆಯಲ್ಲಿ 16, ಹುಮನಾಬಾದ್ ತಾಲೂಕಿನ ಜನತಾ ನಗರ-04, ಘಾಟ ಬೋರಾಳ-01, ಘೋಡವಾಡಿ-04, ಬಸವಕಲ್ಯಾಣ ತಾಲೂಕಿನ ಹತ್ಯಾಳ-01, ಗುಣತಿರ್ಥವಾಡಿ-01, ಬೀದರ್ ನಗರದ ನಂದಿ ಕಾಲೋನಿ-01, ವಡ್ಡರ ಕಾಲೋನಿ-02, ಸಿಎಂಸಿ ಕಾಲೋನಿ-03, ಮೈಲೂರ-03, ಓಲ್ಡ್ ಸಿಟಿಯ ಮನಿಯಾರ ತಾಲೀಮ್-01, ಬೀದರ್ ತಾಲೂಕಿನ ಚಟನಳ್ಳಿ-04 ಹಾಗೂ ಬೀದರ್ನ ಕೆಹೆಚ್ಬಿ ಕಾಲೋನಿ ಪ್ರತಾಪ ನಗರದಲ್ಲಿ -02 ಪ್ರಕರಣ ಪತ್ತೆಯಾಗಿವೆ.
ಇಂದಿನ 73 ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 484ಕ್ಕೆ ಏರಿಕೆಯಾಗಿದೆ. ಇಂದು 12 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 266 ಜನ ಗುಣಮುಖರಾಗಿದ್ದಾರೆ. ಸದ್ಯ 205 ಜನರು ಚಿಕಿತ್ಸೆ ಪಡೆಯುತ್ತಿದ್ದು, 13 ಜನರು ಸಾವಿಗೀಡಾಗಿದ್ದಾರೆ.