ಬೀದರ್: ಜಿಲ್ಲೆಯಲ್ಲಿ ಇಂದು ಹೊಸದಾಗಿ 62 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಇಂದು ಜಿಲ್ಲೆಯ ಔರಾದ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಬೀದರ್ ತಾಲೂಕಿನಾದ್ಯಂತ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4665 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು ಸೋಂಕಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಈ ಮೂಲಕ 135 ಮಂದಿ ಮೃತಪಟ್ಟಂತಾಗಿದೆ.
ಈ ದಿನ ಜಿಲ್ಲೆಯಲ್ಲಿ ಸುಮಾರು 91 ಮಂದಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದಾರೆ. ಈ ಮೂಲಕ ಒಟ್ಟು 4026 ಜನರು ಗುಣಮುಖರಾದಂತಾಗಿದೆ. ಇನ್ನು ಜಿಲ್ಲೆಯಲ್ಲಿ 499 ಸಕ್ರಿಯ ಪ್ರಕರಣಗಳಿವೆ.