ETV Bharat / state

ಕೊರೊನಾ ವರದಿ ನೆಗೆಟಿವ್​: ಬೀದರ್​​ನ ಶಾಹಿನ್ ಕ್ವಾರಂಟೈನ್​ನಿಂದ 50 ಜನರಿಗೆ ಬಿಡುಗಡೆ ಭಾಗ್ಯ - ಕೊರೊನಾ ವೈರಸ್​

ಸೋಂಕಿತರೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಮುಂಜಾಗ್ರತ ಕ್ರಮವಾಗಿ ಶಾಹಿನ್​ ಸಂಸ್ಥೆಯ ಕ್ವಾರಂಟೈನ್​ಲ್ಲಿಡಲಾಗಿದ್ದ 193 ಜನರ ಪೈಕಿ 50 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ.

50-people-released-form-shaheen-quarantine-bidar
ಶಾಹಿನ್ ಕ್ವಾರೇಂಟೆನ್
author img

By

Published : Apr 20, 2020, 12:00 PM IST

ಬೀದರ್: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈ ಮೊದಲು ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದು ಎಂಬ ಶಂಕೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಹಿನ್ ಸಂಸ್ಥೆಯ ಕ್ವಾರಂಟೈನ್​ ಕೇಂದ್ರದಲ್ಲಿ ಇರಿಸಲಾಗಿದ್ದ 193 ಜನರ ಪೈಕಿ 50 ಜನರ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಇಂದು ಬಿಡುಗಡೆ ಮಾಡಲಾಗಿದೆ.

ಶಾಹಿನ್ ಕ್ವಾರಂಟೈನ್ ನಿಂದ 50 ಜನರಿಗೆ ಬಿಡುಗಡೆ ಭಾಗ್ಯ

ನಗರದ ಹೊರ ವಲಯದಲ್ಲಿರುವ ಶಾಹಿನ್ ಕ್ವಾರಂಟೈನ್​ನಲ್ಲಿ ಶಂಕಿತ ಸೋಂಕಿತರನ್ನು ಇಡಲಾಗಿತ್ತು. ರಕ್ತ ಹಾಗೂ ಗಂಟಲು ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ನೆಗೆಟಿವ್ ಬಂದ್ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.

ಶಾಹಿನ್ ಕ್ವಾರಂಟೈನ್​​ನಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದ 193 ಜನರನ್ನು ತೀವ್ರ ನಿಗಾದಲ್ಲಿ ಇಡಲಾಗಿತ್ತು. ಓಲ್ಡ್ ಸಿಟಿ, ಸಿಂಗರ್ ಬಾಗ್ ಭಾಗದ ಮಕ್ಕಳು, ಮಹಿಳೆಯರು, ಪುರುಷರು ಕ್ವಾರಂಟೈನ್​ಲ್ಲಿದ್ದರು. ಶಾಹಿನ್ ಕಾಲೇಜಿನಿಂದ ಶಾಲಾ ವಾಹನದಲ್ಲೇ ಅವರವರ ಮನೆಗಳಿಗೆ ವಾಪಸಾದ ಸಂದರ್ಭದಲ್ಲಿ ಬಡಾವಣೆ ನಿವಾಸಿಗರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು. ಈ ವೇಳೆ ಕ್ವಾರಂಟೈನ್​​ನಿಂದ ಹೊರಬಂದವರು ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.