ETV Bharat / state

ಬಸವಕಲ್ಯಾಣ: ಕಾಳ ಸಂತೆಗೆ ಸಾಗಿಸುತ್ತಿದ್ದ 250 ಕ್ವಿಂಟಾಲ್​​ ಪಡಿತರ ಅಕ್ಕಿ ಜಪ್ತಿ - 250 quintal of rice siege in basavakalyan

ಅನ್ನ ಭಾಗ್ಯದ ಅಕ್ಕಿಗೆ ಕನ್ನ ಹಾಕಲಾಗುತ್ತಿದೆ. ಬಡವರ ಹೊಟ್ಟೆ ಸೇರಬೇಕಿದ್ದ 250 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಅನ್ಯ ರಾಜ್ಯಕ್ಕೆ ಸಾಗಿಸುತ್ತಿದ್ದಾಗ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

dsdd
ಬಸವಕಲ್ಯಾಣ: ಕಾಳ ಸಂತೆಗೆ ಸಾಗಿಸುತಿದ್ದ 25 ಟನ್ ಪಡಿತರ ಅಕ್ಕಿ ಜಪ್ತಿ
author img

By

Published : Jun 18, 2020, 3:59 PM IST

Updated : Jun 18, 2020, 4:08 PM IST

ಬಸವಕಲ್ಯಾಣ: ಅನ್ನ ಭಾಗ್ಯ ಯೋಜನೆಯ ಅಕ್ಕಿಗೆ ಕನ್ನ ಹಾಕುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಡವರ ಹೊಟ್ಟೆ ಸೇರಬೇಕಿದ್ದ 250 ಕ್ವಿಂಟಾಲ್ ಅಕ್ಕಿಯನ್ನು ಅನ್ಯ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹೈದ್ರಾಬಾದ್-ಮುಂಬೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ-65 ರಿಂದ ಹುಮನಾಬಾದ್​ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸುವಾಗ ಸಸ್ತಾಪುರ ಬಂಗ್ಲಾ ಸಮೀಪದ ಮುಡಬಿ ಕ್ರಾಸ್ ಬಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲಾರಿ ಚಾಲಕ ಅವಿನಾಶ್ ಧೂಳೆ ಸಹಿತ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಕಾಳ ಸಂತೆಗೆ ಸಾಗಿಸುತ್ತಿದ್ದ 250 ಕ್ವಿಂಟಾಲ್​​ ಪಡಿತರ ಅಕ್ಕಿ ಜಪ್ತಿ

ಕಾಳ ಸಂತೆಯಲ್ಲಿ ಮಾರಾಟ ಮಾಡಲೆಂದು ಯಾದಗಿರಿಯಿಂದ ಮಹಾರಾಷ್ಟ್ರ ಕಡೆ ಅಕ್ಕಿ ಸಾಗಿಸಲಾಗುತಿತ್ತು ಎನ್ನಲಾಗ್ತಿದೆ. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 18, 2020, 4:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.