ETV Bharat / state

ಇರಾನಿ ಗ್ಯಾಂಗ್​​ನ ಇಬ್ಬರಲ್ಲಿ ಕೊರೊನಾ.. ಅರೆಸ್ಟ್ ಮಾಡಿದ್ದ ಪೊಲೀಸರಲ್ಲೂ ಭೀತಿ - Irani gang detained

ಜೈಲಿನ ಕೈದಿಗಳಿಗೂ ಕೊರೊನಾ ದೃಢವಾಗುತ್ತಿದ್ದು, ಪೊಲೀಸ್ ಠಾಣೆಗಳೂ ಸೀಲ್​ಡವನ್​ ಆಗಿವೆ. ಇದೇ ರಿತಿ ಇಲ್ಲಿನ ಸಂತಪೂರ್​ ಠಾಣೆಯಲ್ಲಿ ಬಂಧಿಸಲಾದ ಇರಾನಿ ಗ್ಯಾಂಗ್​​​​​​ನ ಇಬ್ಬರಿಗೆ ಕೊರೊನಾ ದೃಢವಾಗಿ, ಇದೀಗ ಪೊಲೀಸರಿಗೂ ಭಯ ಕಾಡತೊಡಗಿದೆ..

2 Members from Irani gang tested positive: Fear at police who were arrested
ಇರಾನಿ ಗ್ಯಾಂಗ್​​ನ ಇಬ್ಬರಲ್ಲಿ ಕೊರೊನಾ: ಅರೆಸ್ಟ್ ಮಾಡಿದ್ದ ಪೊಲೀಸರಲ್ಲೂ ಭೀತಿ
author img

By

Published : Jul 18, 2020, 5:14 PM IST

ಬೀದರ್ : ಸರಗಳ್ಳತನ ಆರೋಪದಲ್ಲಿ ಬಂಧಿಸಲಾಗಿದ್ದ 8 ಮಂದಿ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್​​​ ದೃಢವಾಗಿದ್ದು, ಇದೀಗ ಬಂಧಿಸಿದ್ದ ಪೊಲೀಸರಿಗೂ ಭೀತಿ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಕೊರಳಿನಿಂದ ಸರಗಳ್ಳತನ ಮಾಡ್ತಿದ್ದ ಇರಾನಿ ಗ್ಯಾಂಗ್​​​​ನ ಇಬ್ಬರು ಆರೋಪಿಗಳು ಇವರಾಗಿದ್ದು, ಸಂತಪೂರ್​ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು.

ಇರಾನಿ ಗ್ಯಾಂಗ್​ನ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಕಳ್ಳತನ ಮಾಡಿ ಬೈಕ್ ಮೂಲಕ ಪರಾರಿಯಾಗುವ ಈ ಗ್ಯಾಂಗ್ ಸಂತಪೂರನಿಂದ ವಡಗಾಂವ್ ರಸ್ತೆಯತ್ತ ಹೊರಟಿರುವಾಗ ಬೋರ್ಗಿ ಗ್ರಾಮಸ್ಥರ ಸಹಾಯದಿಂದ ಪೊಲೀಸರು ಅರೆಸ್ಟ್​​​ ಮಾಡಿದ್ದರು. ಆರೋಪಿಗಳನ್ನು ಜೈಲಿಗೆ ಕಳಿಸುವುದಕ್ಕೂ ಮೊದಲು ನ್ಯಾಯಾಲಯದ ಆದೇಶದ ಮೇರೆಗೆ ಎಲ್ಲಾ ಆರೋಪಿಗಳ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.

ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದ 6 ಜನರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರಿಗೆ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

ಪೊಲೀಸರಲ್ಲಿ ಆತಂಕ : ಆರೋಪಿಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗ್ತಿದ್ದಂತೆ ಕಾರ್ಯಾಚರಣೆ ಮಾಡಿ ಕಳ್ಳರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಸೇರಿ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ. ಸೋಂಕಿತ ಆರೋಪಿಗಳ ಸಂಪರ್ಕಕ್ಕೆ ಬಂದ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಈ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.