ಬಸವಕಲ್ಯಾಣ: ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಬೈಕ್ಗಳನ್ನು ಕಳ್ಳತನ ಮಾಡಿದ್ದಲ್ಲದೆ, ಕೆಲವೆಡೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ನಗರದ ರಜಪುತ್ ಗಲ್ಲಿಯಲ್ಲಿ ನಡೆದಿದೆ.
ನಗರದ ಹಜಾರಿ ಬಂಕ್ ಮಾಲೀಕರಾದ ಸೋನುಸಿಂಗ್ ಹಜಾರಿ ಅವರಿಗೆ ಸೇರಿದ ಟಿವಿಎಸ್ ಜುಪಿಟರ್ ಬೈಕ್ ಅನ್ನು ತಮ್ಮ ಬಂಕ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವಿಠಲ್ ಸಿಂಗ್ ಎಂಬವರಿಗೆ ನೀಡಿದ್ದರು. ವಿಠಲ್ ಸಿಂಗ್ ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿ ಮಲಗಿದ್ದಾಗ ಕಿಡಿಗೇಡಿಗಳು ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 50 ರೂ. ಸಾವಿರಕ್ಕೂ ಅಧಿಕ ಮೌಲ್ಯದ ಬೈಕ್ ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸುದ್ದಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಿಡಿಗೇಡಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಓದಿ: ಹಣದ ವಿಚಾರ: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಕೊನೆ!
ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಎರಡು ಬೈಕ್ಗಳು ಕಳುವಾದ ಘಟನೆ ನಗರದ ವೈಷ್ಣವಿ ಲೇಔಟ್ನಲ್ಲಿ ನಡೆದಿದೆ. ಅವಿನಾಶ್ ದುಬೆ ಅವರಿಗೆ ಸೇರಿದ ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಹಾಗೂ ಇದೆ ಲೈಔಟ್ನ ಚಂದ್ರಕಾಂತ್ ಅರ್ಜುನ್ ಎನ್ನುವರಿಗೆ ಸೇರಿದ ಹೀರೋ ಫ್ಯಾಷನ್ ಪ್ರೊ ಬೈಕ್ಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಒಂದೇ ರಾತ್ರಿಯಲ್ಲಿ ಮನೆ ಮುಂದೆ ನಿಲ್ಲಿಸಿದ 2 ಬೈಕ್ಗಳ ಕಳವು ಪ್ರಕರಣ ಮತ್ತು ಬೈಕ್ಗೆ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ನಡೆದಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.