ETV Bharat / state

ಬೀದರ್​​​​​​​ನಲ್ಲಿ ಕೊರೊನಾ ಅಟ್ಟಹಾಸ: 12 ಕೊರೊನಾ ಪಾಸಿಟಿವ್ ಪತ್ತೆ, ಓರ್ವ ಬಲಿ

ಬೀದರ್​​​ನಲ್ಲಿಂದು 12 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಓರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ 8 ಮಂದಿ ಸಾವನಪ್ಪಿದಂತಾಗಿದೆ. ಅಲ್ಲದೆ 239 ಜನ ಗುಣಮುಖರಾಗಿದ್ದರೆ ಇನ್ನೂ 148 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

12 New corona positive and One death reported in bidar
ಬೀದರ್​​​​​​​ನಲ್ಲಿ ಕೊರೊನಾ ಅಟ್ಟಹಾಸ: 12 ಪಾಸಿಟಿವ್ ಪತ್ತೆ, ಓರ್ವ ಬಲಿ
author img

By

Published : Jun 17, 2020, 9:53 PM IST

ಬೀದರ್: ಮಹಾರಾಷ್ಟ್ರದಿಂದ ಮರಳಿದ್ದವರಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು 12 ಜನರಲ್ಲಿ ಸೋಂಕು ದೃಢವಾಗಿ ಓರ್ವ ಸಾವನಪ್ಪಿದ್ದಾನೆ.

27 ವರ್ಷದ ಪುರುಷ ಪಿ-7636 ಸಂಖ್ಯೆಯ ವ್ಯಕ್ತಿ ಕಳೆದ ಜೂನ್ 15 ರಂದು ಸಾವನ್ನಪ್ಪಿದ್ದು, ಆತನ ಗಂಟಲು ದ್ರವದ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಔರಾದ್ ತಾಲೂಕಿನ ಬಾಚೆಪಳ್ಳಿ-01, ಬೆಳಕೋಣಿ(ಚೌಧರಿ)-02, ಸಂತಪೂರ-01, ಮಸ್ಕಲ್-01, ಕಮಲನಗರ ತಾಲೂಕಿನ ಗಂಗನಬೀಡ ತಾಂಡ-02, ಬಸನಾಳ-02, ಬೀದರ್ ತಾಲೂಕಿನ ಬಗದಲ ತಾಂಡ-01 ಹಾಗೂ ಖೇಣಿ ರಂಜೋಳ ಗ್ರಾಮದಲ್ಲಿ 01 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದ್ದು, 239 ಜನರು ಗುಣಮುಖರಾಗಿದ್ದಾರೆ. ಅಲ್ಲದೆ 8 ಜನರು ಸಾವನಪ್ಪಿದ್ದು 148 ಜನರು ಕೊರೊನಾ ವಾರ್ಡ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.