ETV Bharat / state

ಅಂಧಾನುಕರಣೆ ಬಿಟ್ಟು ಸ್ವತಂತ್ರ ತಲೆಯುಳ್ಳವರಾಗಿ: ಯುವಕರಿಗೆ ನಿಜಗುಣಾನಂದ ಸ್ವಾಮೀಜಿ ಸಲಹೆ

ಯುವ ಜನರು ಬೇರೆಯವರ ಮಾತಿಗೆ ಕಿವಿ ಕೊಡದೆ, ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಶಕ್ತಿ ಹೊಂದಬೇಕು. ಅತಂತ್ರ, ಕುತಂತ್ರ, ಪರತಂತ್ರ ತಲೆಯ ಬದಲು ಸ್ವತಂತ್ರ ತಲೆ ನಿಮ್ಮದಾಗಬೇಕು ಎಂದು ಯುಕರಿಗೆ ಕಿವಿ ಮಾತು ಹೇಳಿದರು.

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್​ನಲ್ಲಿ ನಿಜಗುಣಾನಂದ ಸ್ವಾಮಿಜಿಯ ಮಾತು
author img

By

Published : Oct 25, 2019, 8:46 AM IST

ಬಳ್ಳಾರಿ: ಇಂದಿನ ಯುವಜನರು ಸ್ವತಂತ್ರ ತಲೆವುಳ್ಳವರಾಗಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜ ಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್ ನ ಆರೋಗ್ಯ ಮಾತೆ ಪುಣ್ಯಕ್ಷೇತ್ರ ಆವರಣದ ತೆರೆದ ಸಭಾಂಗಣದಲ್ಲಿ 11ನೇ ಕರ್ನಾಟಕ ಪ್ರಾಂತೀಯ ಯುವ ಜನೋತ್ಸವವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ತಲೆಗಳಲ್ಲಿ ನಾಲ್ಕು ವಿಧ. ಅತಂತ್ರ, ಕುತಂತ್ರ, ಪರತಂತ್ರ ಹಾಗೂ ಸ್ವತಂತ್ರ ಬುದ್ಧಿಯುಳ್ಳ ತಲೆಗಳಿರುತ್ತವೆ. ಅತಂತ್ರ, ಕುತಂತ್ರ ಹಾಗೂ ಪರತಂತ್ರ ತಲೆಗಳ ಕಾರ್ಯ ವೈಖರಿಯನ್ನು ಎಳೆ ಎಳೆಯಾಗಿ ವಿವರಿಸುತ್ತಲೇ ನೆರೆದ ಯುವಜನರನ್ನು ನಗೆಗಡಲಲ್ಲಿ ತೇಲಿಸಿದರು‌.

ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್​ನಲ್ಲಿ ನಿಜಗುಣಾನಂದ ಸ್ವಾಮಿಜಿಯ ಮಾತು

ಯುವಜನರು ಆ ಮೂರು ತಲೆಗಳನ್ನು ಬಿಟ್ಟು ಸ್ವತಂತ್ರ ಬುದ್ಧಿಯುಳ್ಳವಂತರಾಗಿ. ಅಂಧಾನುಕರಣೆ, ಅಂಧ ಶ್ರದ್ಧೆಯನ್ನು ತೊರೆದು ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯಲ್ಲಿ ಮಿಂದೇಳುವುದನ್ನು ಮೊದಲು ನೀವು ಕಲಿಯಬೇಕು ಎಂದರು.

Intro:ಯುವಜನರು ಸ್ವತಂತ್ರ ತಲೆವುಳ್ಳವರಾಗಿ: ನಿಜಗುಣ ಪ್ರಭು ಸ್ವಾಮೀಜಿ
ಬಳ್ಳಾರಿ: ಇಂದಿನ ಯುವಜನರು ಸ್ವತಂತ್ರ ತಲೆವುಳ್ಳವರಾಗ ಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜ ಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಬಳ್ಳಾರಿಯ ಕ್ಯಾಥೋಲಿಕ್ ಚರ್ಚ್ ನ ಅರೋಗ್ಯ ಮಾತೆ
ಪುಣ್ಯಕ್ಷೇತ್ರ ಆವರಣದ ತೆರೆದ ಸಭಾಂಗಣದಲ್ಲಿಂದು 11ನೇ ಕರ್ನಾಟಕ ಪ್ರಾಂತೀಯ ಯುವ ಜನೋತ್ಸವವನ್ನು ಸಸಿಗೆ ನೀರುಣಿಸುವ ಮುಖೇನ ಉದ್ಘಾಟಿಸಿ ಅವರು ಮಾತನಾಡಿ ದರು.
ಈ ಮನುಷ್ಯನ ತಲೆಗಳಲ್ಲಿ ನಾಲ್ಕು ವಿಧ. ಅತಂತ್ರ, ಕುತಂತ್ರ, ಪರತಂತ್ರ ಹಾಗೂ ಸ್ವತಂತ್ರ ಬುದ್ಧಿಯುಳ್ಳ ತಲೆಗಳಿರುತ್ತವೆ. ಅತಂತ್ರ, ಕುತಂತ್ರ ಹಾಗೂ ಪರತಂತ್ರ ತಲೆಗಳ ಕಾರ್ಯ ವೈಖರಿಯನ್ನು ಎಳೆಎಳೆಯಾಗಿ ವಿವರಿಸುತ್ತಲೇ ನೆರೆದ ಯುವಜನರನ್ನು ನಗೆಗಡಲಲ್ಲಿ ತೇಲಿಸಿದರು‌.
ಯುವಜನರು ಆ ಮೂರು ತಲೆಗಳನ್ನು ಬಿಟ್ಟು ಸ್ವತಂತ್ರ ಬುದ್ಧಿಯುಳ್ಳವಂತರಾಗಿ ಎಂದರಲ್ಲದೇ, ಅಂಧಾನುಃಕರಣೆ, ಅಂಧಶ್ರದ್ಧೆಯನ್ನು ತೊರೆದು ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯಲ್ಲಿ ಮಿಂದ್ಹೇಳುವುದನ್ನು ಮೊದ್ಲು ನೀವು ಕಲಿಯ ಬೇಕು ಎಂದರು.

Body:ಈ ದೇಶದ ಬಹುಸಂಖ್ಯಾತ ಧರ್ಮೀಯರ, ಜನಾಂಗ ಹಾಗೂ ಸಂಸ್ಕೃತಿಯುಳ್ಳದ್ದಾಗಿದೆ. ಎಲ್ಲ ಭಾಷೆ, ಜಾತಿ, ಧರ್ಮ, ಮತ - ಪಂಥಗಳನ್ನು ಅತ್ಯಂತ ಪ್ರೀತಿಯಿಂದ ಕಾಣುವ ಮನೋಭಾವನೆ ಯನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕಿದೆ. ಅದನ್ನು ಬಿಟ್ಟು ಧರ್ಮರಾಜಕಾರಣ, ಜಾತಿ ರಾಜಕಾರಣದತ್ತ ಈ ದೇಶ ಸಾಗುತ್ತಿ ರೋದಕ್ಕೆ ನಿಜಗುಣ ಪ್ರಭು ಸ್ವಾಮೀಜಿ ಕಳವಳ ವ್ಯಕ್ತಪಡಿಸಿ ದ್ದಾರೆ.
ಕರ್ನಾಟಕದ ಹದಿನಾಲ್ಕು ಧರ್ಮಕ್ಷೇತ್ರಗಳ ಯುವಜನರು ಹಾಗೂ ಫಾದರ್ ಗಳು ಭಾಗವಹಿಸಿದ್ದರು. ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಯುವಜನರು ಇಲ್ಲಿ ಪಾಲ್ಗೊಂಡು ಆಯಾ ಪ್ರಾಂತ್ಯದ ಕಲೆ, ಸಂಸ್ಕೃತಿಯನ್ನು ಪರಿಚಯಿಸಿದ್ರು.

Conclusion:ಗದುಗಿನ ಮಠದ ಮಹಾಂತಸ್ವಾಮೀಜಿ, ಚಿಕ್ಕಮಗಳೂರಿನ ಆಂಥೋನಿ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಬಳ್ಳಾರಿ ಧರ್ಮಾಧ್ಯಕ್ಷ ಡಾ. ಹೆನ್ರೀ ಡಿಸೋಜಾ, ಶಾರದಾ ಮಾತೆ, ಸ್ವಾಮಿ ಮರಿಜೋಸೆಫ್, ಸೃಜಿತ್ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_4_STATE_LEVEL_YUVA_JANOSTAVA_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.