ಬಳ್ಳಾರಿ : ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಆರೋಪಿಯನ್ನು ಜಿಲ್ಲೆಯ ಸಿರುಗುಪ್ಪ ಪೊಲೀಸರು ನಿನ್ನೆ (ಭಾನುವಾರ) ರಾತ್ರಿ ಬಂಧಿಸಿದ್ದಾರೆ.
ಸಿರಗುಪ್ಪ ನಿವಾಸಿ ಹುಸೇನ್ ಎಂಬಾತ ಬಂಧಿತ ವ್ಯಕ್ತಿ. ಆತ ಪಾಕಿಸ್ತಾನ ಧ್ವಜವನ್ನು ಮೈಮೇಲೆ ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾನೆ. ಇದರ ವಿಡಿಯೋ ತುಣುಕನ್ನು ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾನೆ. ಅಲ್ಲದೆ, ಇತರರಿಗೂ ಶೇರ್ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದಂತೆ ಸಿರುಗುಪ್ಪ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿರುಗುಪ್ಪದಲ್ಲಿ ಪ್ರತಿಭಟನೆ : ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಸಿರುಗುಪ್ಪದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭಜರಂಗ ದಳದ ಸಂಚಾಲಕ ಚನ್ನಬಸವ ಅವರು ಈ ಕುರಿತು ಮಾತನಾಡಿದರು. ಹುಸೇನ್ ಅವರು ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಬಂಧನವಾಗಿರುವ ಆರೋಪಿ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಓದಿ: ಇನ್ಮುಂದೆ ರಾಜ್ಯಾದ್ಯಂತ ಪ್ರತಿ ದಿನ 5 ಲಕ್ಷ ಡೋಸ್ ಕೋವಿಡ್ ಲಸಿಕೆ ವಿತರಣೆ: ಡಾ. ಕೆ ಸುಧಾಕರ್