ಬಳ್ಳಾರಿ: ಫೆ.17 ರಂದು ನಡೆದ ಮೋಕ ಜಾತ್ರೆಯಲ್ಲಿ ಯುವತಿಯೋರ್ವಳು ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದು ಮೋಕ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ರಾಯದುರ್ಗ ತಾಲೂಕಿನ ಅನಕನಾಳ್ ಗ್ರಾಮದ ಝಾನ್ಸಿ(22) ಎಂಬ ಯುವತಿ ಫೆ.17 ರಂದು ಮೋಕ ಜಾತ್ರೆಯಲ್ಲಿ ಕಾಣೆಯಾಗಿದ್ದು, ಈ ಕುರಿತು ದೂರು ದಾಖಲಾಗಿದೆ ಎಂದು ಮೋಕ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ಯುವತಿಯ ಚಹರೆ ಗುರುತು :
5.2 ಅಡಿ ಎತ್ತರ, ದುಂಡು ಮುಖ, ಬೀಳಿ ಮೈ ಬಣ್ಣ, ಹಣೆಯ ಮೇಲೆ ಮಚ್ಚೆಯ ಗುರುತು ಮತ್ತು ಎಡಮೂಗಿನ ಹತ್ತಿರ ಎರಡು ಸಣ್ಣ ಕಪ್ಪು ಮಚ್ಚೆ ಇರುತ್ತದೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.
ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.ಸಂ. 08392-258100, 9480803021, 9480803031, 9480803050, 0892293228 ಗೆ ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.