ಬಳ್ಳಾರಿ: ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕದಿಂದ ಭಾನುವಾರ ನಗರದ ಸೆಂಟನರಿ ಸಭಾಂಗಣದಲ್ಲಿ ವಿಷ್ಣು 10ನೇ ಪುಣ್ಯ ಸ್ಮರಣೆ ಪ್ರಯುಕ್ತ 'ಯಜಮಾನ್ರೋತ್ಸವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಂಹಾದ್ರಿ-ಸಸ್ಯಾದ್ರಿ ಅಡಿಯಲ್ಲಿ10 ಸಾವಿರ ಸಸಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಲನಚಿತ್ರ ನಿರ್ದೇಶಕ ರವಿ ಶ್ರೀವತ್ಸ ಚಿತ್ರರಂಗದಲ್ಲಿ ನಾನು ಹೆಸರು ಮಾಡಿದ್ದೀನಿ ಅಂದರೆ ಅವೆಲ್ಲವೂ ಯಜಮಾನ ಕೊಟ್ಟಿರುವ ಭಿಕ್ಷೆ. ನನಗೆ ರಾಜ್ ಕುಮಾರ್, ಅಂಬರೀಷ್ ಗಿಂತಲೂ ವಿಷ್ಣುವರ್ಧನ್ ಹೆಚ್ಚು ಎಂದರು.
ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗೇಂದ್ರ ಪ್ರಸಾದ್ ವಿಷ್ಣು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದೆರು. ವಿಷ್ಣು ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೆವೆ ಎಂದು ತಿಳಿಸಿದರು
ಇದೇ ವೇಳೆ ಕಸಾಪ ಜಿಲ್ಲಾದ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ ಅವರು ಬಿಸಿಲನಾಡು ಬಳ್ಳಾರಿಯನ್ನು ಹಸಿರುನಾಡನ್ನಾಗಿ ಮಾಡುವ ಕೆಲಸವನ್ನು ವಿಷ್ಣುವರ್ಧನ ಸೇನಾ ಸಮಿತಿ ಮಾಡ್ತಾ ಇದೆ ಎಂದು ತಿಳಿಸಿದರು. ವಿಷ್ಣು ಮಾಡಿದ ಚಲನಚಿತ್ರಗಳೆಲ್ಲವು ದೇಶಕ್ಕೆ ಒಂದೊಲ್ಲೊಂದು ಸಂದೇಶ ಸಾರಿದೆ.