ಹೊಸಪೇಟೆ: ಹಂಪಿಯ ತುಂಗಭದ್ರಾ ನದಿಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಿತೃ ಪಕ್ಷದ ಅಂಗವಾಗಿ ಪೂಜೆ ಸಲ್ಲಿಸಿದರು.
ಹಂಪಿಯ ಕೋದಂಡರಾಮ ದೇವಸ್ಥಾನದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ಬಳಿಕ ಮಂಟಪದಲ್ಲಿ ಪೂಜೆ ನೆರವೇರಿಸಿ ಬಳಿಕ ಪೂಜಾ ಸಮಾಗ್ರಿಗಳನ್ನು ನದಿಯಲ್ಲಿ ವಿಸರ್ಜಿಸಿದರು. ನಂತರ ವಿರೂಪಾಕ್ಷೇಶ್ವರ, ಪಂಪಾಂಬಿಕೆ, ಭುವನೇಶ್ವರಿ ದರ್ಶನ ಪಡೆದರು. ಪುರೋಹಿತ ಮೋಹನ್ ಚಿಕ್ಕಭಟ್ ಜೋಶಿ ಇನ್ನಿತರರಿದ್ದರು.