ಬಳ್ಳಾರಿ: ಕುರಿ ಮೇಯಿಸಲು ಹೋಗಿದ್ದ ಮಹಿಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ತಾಲೂಕಿನ ಕೃಷ್ಣಾನಗರ ಕ್ಯಾಂಪ್ ನಿವಾಸಿ ಸರಸ್ವತಿ (63) ಮೃತ ಮಹಿಳೆ. ಇವರು ಕುರಿ ಮೇಯಿಸಲು ಹೋಗಿದ್ದ ವೇಳೆ ಕೊಳಗಲ್ಲು ಸಮೀಪದ ಕೆರೆಯೊಂದರಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಸಂಜೆ ವೇಳೆಗೆ ಕುರಿಗಳು ಮನೆಗೆ ಹಿಂದಿರುಗಿದ್ದು, ಸರಸ್ವತಿಯವರು ಮನೆಗೆ ಬರಲಿಲ್ಲ. ಬಳಿಕ ಮನೆಯವರು ಹುಡುಕಿಕೊಂಡು ಹೋದ ವೇಳೆ ಮೃತದೇಹ ಪತ್ತೆಯಾಗಿದೆ ಎಂದು ಗ್ರಾಮೀಣ ಠಾಣೆಯ ಪೊಲೀಸರು ತಿಳಿಸಿದರು.