ETV Bharat / state

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಳ್ಳಾರಿಯನ್ನು ದೇಶದ ಜೀನ್ಸ್ ರಾಜಧಾನಿ ಮಾಡುತ್ತೇವೆ : ರಾಹುಲ್ ಗಾಂಧಿ - ETV Bharat Karnataka

ಬಳ್ಳಾರಿ ನಗರ ಮತ್ತು ಗ್ರಾಮೀಣ ಅಭ್ಯರ್ಥಿಗಳ ಪರ ರಾಹುಲ್ ಗಾಂಧಿ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

Congress leader Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
author img

By

Published : Apr 28, 2023, 10:59 PM IST

ಬಳ್ಳಾರಿ : ಜೀನ್ಸ್ ಉದ್ಯಮದಲ್ಲಿ ಬಳ್ಳಾರಿ ಜಿಲ್ಲೆ ಹೆಸರುವಾಸಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಬಳ್ಳಾರಿಯನ್ನು ದೇಶದ ಜೀನ್ಸ್ ರಾಜಧಾನಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಶುಕ್ರವಾರ ಸಂಜೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ ಅವರ ಪರ ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ ನಡೆಸಿದರು.

ಬಳಿಕ ಮೋತಿ ಸರ್ಕಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಭಾರತ ಜೋಡೊ ಯಾತ್ರೆ ಸಂದರ್ಭದಲ್ಲಿ ಬಳ್ಳಾರಿಗೆ ಬಂದಿದ್ದಾಗ ಇಲ್ಲಿನ ಜೀನ್ಸ್ ಉದ್ಯಮವನ್ನು ಕಣ್ಣಾರೆ ಕಂಡಿರುವೆ. ಉದ್ಯಮ ಎದುರಿಸುತ್ತಿರುವ ಸಮಸ್ಯೆ ಅರಿತಿರುವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚನೆ ಮಾಡಿದಲ್ಲಿ ಐದು ವರ್ಷದಲ್ಲಿ ಜೀನ್ಸ್ ಇಂಡಸ್ಟ್ರೀಸ್ ಪಾರ್ಕ್ ಸ್ಥಾಪಿಸಿ, ದೇಶದಲ್ಲಿ ಜೀನ್ಸ್ ಉದ್ಯಮಕ್ಕೆ ಬಳ್ಳಾರಿ ಅನ್ವರ್ಥನಾಮವಾಗುವಂತೆ ಮಾಡುವೆವು ಎಂದರು.

ಇದನ್ನೂ ಓದಿ : ಪ್ರಚಾರದಲ್ಲಿ ತೊಡಗಿದ್ದ ಪರಮೇಶ್ವರ್ ಮೇಲೆ ಕಲ್ಲೆಸೆತ: ಮಾಜಿ ಡಿಸಿಎಂ ತಲೆಗೆ ಗಾಯ

ಕರ್ನಾಟಕದಲ್ಲಿ ಯಾವ ಸರ್ಕಾರ ರಚನೆ ಮಾಡಬೇಕೆಂದು ನೀವು ನಿರ್ಧಾರ ಮಾಡಬೇಕಿದೆ. ರಾಜ್ಯದಲ್ಲಿ ಬಿಜೆಪಿಯು ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಿತ್ತು. ನಂತರ ಶೇ 40ರಷ್ಟು ಕಮೀಷನ್ ಪಡೆಯಿತು. ಅವರಿಗೆ 40 ನಂಬರ್ ಬಹಳ ಇಷ್ಟ ಇದೆ. ಅದಕ್ಕಾಗಿ ಅಷ್ಟೇ ಸ್ಥಾನ ಅವರಿಗೆ ದೊರೆಯಲಿದೆ ಎಂದು ವ್ಯಂಗ್ಯವಾಡಿದ ರಾಹುಲ್, ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರೆಂಟಿಗಳನ್ನು ಸರ್ಕಾರ ರಚನೆಯಾದ ಮರುದಿನದವೇ ಸಚಿವ ಸಂಪುಟದಲ್ಲಿ ಘೋಷಿಸಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಕಾಂಗ್ರೆಸ್ ಪಕ್ಷಕ್ಕೆ ತಲೆಯೂ ಇಲ್ಲ, ಬುಡವೂ ಇಲ್ಲ: ಪ್ರಮೋದ್​ ಮಧ್ವರಾಜ ವ್ಯಂಗ್ಯ

ಇದೇ ಸಂದರ್ಭದಲ್ಲಿ ನಗರ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಮಾತನಾಡಿ, ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರು ಗೆದ್ದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ನನ್ನ ಭಾಗ್ಯ. ಇದು ನನ್ನ ತಂದೆ, ತಾಯಿ ಮಾಡಿದ ಪುಣ್ಯ ಎಂದು ಭಾವಿಸುವೆ. ಅಖಂಡ ಬಳ್ಳಾರಿ ಜಿಲ್ಲೆಯ 10 ಸ್ಥಾನಗಳನ್ನು ಜನತೆ ಗೆಲ್ಲಿಸಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲಿ ಎಂದು ಮನವಿ ಮಾಡಿದರು. ಬಳಿಕ ಗ್ರಾಮೀಣ ಅಭ್ಯರ್ಥಿ ಬಿ.ನಾಗೇಂದ್ರ ಮಾತನಾಡಿ, ಬಿಜೆಪಿ ಈ ಬಾರಿ ಗಡ, ಗಡ ನಡುಗಿದೆ. ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಗೆಯಲು ತಾವು ಪಣತೊಡಿ. 1999ರಂತೆ ಜಿಲ್ಲೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುರ್ಜಿವಾಲಾ, ಅಲ್ಲಂ ವೀರಭದ್ರಪ್ಪ. ವಿ.ಎಸ್.ಉಗ್ರಪ್ಪ, ಅಲ್ಲಂ ಪ್ರಶಾಂತ್ , ಆಂಜನೇಯಲು, ವಿಷ್ಣು ಬೋಯಪಾಟಿ ಮೊದಲಾದವರು ಇದ್ದರು.

ಇದನ್ನೂ ಓದಿ : ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಶೋಭಾ ಕರಂದ್ಲಾಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.