ಬಳ್ಳಾರಿ: ಜೆಡಿಎಸ್ ಯಾವ ಪಾರ್ಟಿಯ ಬಿ. ಟೀಂ ಅಲ್ಲ, ನಮ್ಮದು ರೈತರ ಟೀಂ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸ್ಪಷ್ಟಪಡಿಸಿದ್ದಾರೆ.
ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಿದ್ಧವಾದ ಹಳ್ಳಿಹಕ್ಕಿ..!
ಬಳ್ಳಾರಿ ನಗರದ ಮೀನಾಕ್ಷಿ ವೃತ್ತದಲ್ಲಿರುವ ಜೆಡಿಎಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಮುಖಂಡರಿಬ್ಬರು ಜೆಡಿಎಸ್ ಬಿ-ಟೀಂ ಅಂತಾರೆ. ನಾವು ಯಾವುದೇ ಪಕ್ಷದ ಬಿ - ಟೀಂ ಅಲ್ಲ ಎಂದರು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ನವರೇ ನಮಗೆ ವೋಟ್ ಹಾಕಿದ್ದಾರೆ. ನಾವೇನು ಅವರ ಹತ್ತಿರ ಮತ ಹಾಕಿ ಅಂತ ಕೇಳಿಲ್ಲ, ಅವರಾಗಿಯೇ ಬಂದು ವೋಟ್ ಹಾಕಿದ್ದಾರೆ. ಹಾಗಾಗಿ ಮೈತ್ರಿ ಕುರಿತು ಏನು ಮಾತನಾಡುವುದಿಲ್ಲ ಎಂದರು.
ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಉದ್ದೇಶದಿಂದ ದೇವೇಗೌಡ, ಕುಮಾರಸ್ವಾಮಿ, ಶಾಸಕರು, ಹಿರಿಯ ನಾಯಕರ ಸಭೆಗಳನ್ನ ಮಾಡಿ ಶಿಸ್ತು ತರುವ ಮೂಲಕ ಪಕ್ಷ ಕಟ್ಟುವ ತಿರ್ಮಾನ ಮಾಡಿ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸಕ್ಕೆ 7 ವೀಕ್ಷಕರ ತಂಡಗಳು ನಿಯೋಜನೆ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಬೀದರ್ ನಿಂದ, ಗುಲ್ಬರ್ಗ, ರಾಯಚೂರಿನಲ್ಲಿ ಸಭೆ ನಡೆದ ಬಳಿಕ ಬಳ್ಳಾರಿಯಲ್ಲಿ ಸಭೆ ಆಯೋಜಿಸಿದ್ದೇವೆ. ಪಕ್ಷದ ಚಟುವಟಿಕೆಗಳು ಸ್ಥಗಿತವಾಗಿದ್ದು, ಮತ್ತೆ ಆರಂಭಿಸಲು ಪ್ರವಾಸ ಕೈಗೊಂಡಿದ್ದೇವೆ.
ಬಳ್ಳಾರಿ ಜಿಲ್ಲೆಗೆ ಇಬ್ಬರು ವೀಕ್ಷಕರು ವರದಿ ನೀಡಲಿದ್ದಾರೆ. ಬಳಿಕ ಅಭ್ಯರ್ಥಿಗಳನ್ನು ಗುರುತಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಕ್ರಿಯಾಶೀಲ ವ್ಯಕ್ತಿಗಳು ಕಂಡು ಬಂದರೆ ಅವರಿಗೆ ಚುನಾವಣೆ ಟಿಕೆಟ್ ನೀಡಲಾಗುವುದು. ಒಂದು ಬೂತ್ಗೆ ಹತ್ತು ಮಂದಿ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗುವುದು. ಅಲ್ಲದೇ, ಕೆಲಸ ಮಾಡುವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು.