ETV Bharat / state

ಕ್ವಾಯಿನ್ ಹಾಕಿದರೂ ವೇಷ್ಟಾಗುತ್ತೆ.. ಶುದ್ಧ ಕುಡಿಯುವ ನೀರಿನ ಘಟಕಕ್ಕೇ ದಾಹ, ದಾಹ.. - undefined

ನಗರದ ತಾಳೂರು ರಸ್ತೆಯ ಹರಿಶ್ಚಂದ್ರ ನಗರ ವ್ಯಾಪ್ತಿಯ ರುದ್ರಭೂಮಿ ಕಾಂಪೌಂಡ್ ಬಳಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದ್ದು, ಈ ಘಟಕದಲ್ಲಿ ಸರಿಯಾಗಿ ನೀರು ಬರದೆ ಜನರು ಪರದಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ನಗರದಲ್ಲಿನ ಜನರ ಮನವಿ.

ದುಸ್ಥಿತಿಯಿಂದ ಕುಡಿರುವ ನೀರಿನ ಶುದ್ದಿಕರಣ ಘಟಕ
author img

By

Published : May 12, 2019, 5:33 PM IST

ಬಳ್ಳಾರಿ: ನಗರದ ತಾಳೂರು ರಸ್ತೆಯ ಹರಿಶ್ಚಂದ್ರನಗರ ವ್ಯಾಪ್ತಿಯ ರುದ್ರಭೂಮಿ ಕಾಂಪೌಂಡ್ ಬಳಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಆದರೆ, ಸಮರ್ಪಕವಾಗಿ ಅದರಲ್ಲಿ ನೀರು ದೊರೆಯದೆ ಅಲ್ಲಿನ ಜನ ಕಂಗಾಲಾಗಿದ್ದಾರೆ.

ನಗರದ ತಾಳೂರು ರಸ್ತೆಯ ಹರಿಶ್ಚಂದ್ರ ನಗರ ವ್ಯಾಪ್ತಿಯ ರುದ್ರಭೂಮಿ ಕಾಂಪೌಂಡ್ ಬಳಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಆದರೆ, ಈ ಘಟಕದಲ್ಲಿ ಸಮರ್ಪಕವಾಗಿ ನೀರು ದೊರೆಯದೆ ಜನರು ಪರದಾಡುತ್ತಿದ್ದಾರೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಶ್ರಮಿಕರು, ಬಡವರು ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರೆ ಹೆಚ್ಚಾಗಿ ವಾಸ ಮಾಡುತ್ತಿದ್ದು, ಇವರಿಗೆ ಶುದ್ಧ ಕುಡಿಯುವ ನೀರಿನ ಅನಿವಾರ್ಯತೆ ಇದೆ.

ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ

ಈ ಘಟಕದಲ್ಲಿ ಕ್ವಾಯಿನ್​ ಹಾಕಿದರೆ ಬಿಂದಿಗೆಯಲ್ಲಿ ನೀರು ಹಿಡಿದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಬಾಕ್ಸ್​ನಲ್ಲಿ ಕ್ವಾಯಿನ್ ಹಾಕಿದರೆ ಕೆಲವೊಮ್ಮೆ ನೀರು ಬರೋದಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.

ನೀರಿನ ದಾಹ ನೀಗಿಸದ ಶುದ್ಧೀಕರಣ ಘಟಕ :
ಈ ರೀತಿಯ ಶುದ್ಧೀಕರಣ ಘಟಕಗಳು ಜಿಲ್ಲೆಯ ಬಹುತೇಕ ಕಡೆಗಳಲ್ಲಿವೆ. ಆ ಪೈಕಿ ಹರಿಶ್ಚಂದ್ರ ನಗರದಲ್ಲಿನ ಶುದ್ಧೀಕರಣ ಘಟಕವೂ ಕೂಡ ಒಂದು. ಐದು ರೂಪಾಯಿ
ಕ್ವಾಯಿನ್ ಹಾಕಿ ಬಿಂದಿಗೆ ತುಂಬುವಷ್ಟಾದರೂ ನೀರೇ ಬರೋದಿಲ್ಲ. ಒಮ್ಮೊಮ್ಮೆ ಘಟಕದೊಳಗೆ ಕ್ವಾಯಿನ್ ಸೇರಿಕೊಳ್ಳುತ್ತೆ. ಆದರೆ, ಬಿಂದಿಗೆಯಲ್ಲಿ ನೀರು ಸಂಗ್ರಹ ಆಗೋದಿಲ್ಲ. ಇದಕ್ಕೆ ಸಂಬಂಧಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಗರದ ನಿವಾಸಿ ಸುನೀಲ್​ ಕುಮಾರ್​ ಮನವಿ ಮಾಡಿದ್ದಾರೆ.

Intro:ಬಳ್ಳಾರಿ ಹರೀಶ್ಚಂದ್ರ ನಗರದಲ್ಲಿನ ದುಸ್ಥಿತಿಯಿದು
ನೀರು ಶುದ್ಧೀಕರಣ ಘಟಕ ಇದ್ದರೂ ಕುಡಿಯುವ ನೀರಿಗೆ ಬರ!
ಬಳ್ಳಾರಿ: ಅಲ್ಲಿ ನೀರು ಶುದ್ಧೀಕರಣ ಘಟಕ ಇದೆಯಾದ್ರೂ ಕುಡಿಯುವ ನೀರಿಗೆ ಬರವಿದೆ‌. ಸದಾ ಮುಚ್ಚಿರುವ ಆ ಘಟಕ ಮನಸೋ ಇಚ್ಛೆಯಂತೆ ತೆರೆಯಲಾಗುತ್ತಿದೆ. 5 ರೂಪಾಯಿ ಗೋಲ್ಡ್ ಹಾಕಿದ್ರೂ ಕೂಡ ಕುಡಿಯುವ ನೀರು ಮಾತ್ರ ಬರೋದಿಲ್ಲ.
ಹೌದು, ಬಳ್ಳಾರಿ ನಗರದ ತಾಳೂರು ರಸ್ತೆಯ ಹರೀಶ್ಚಂದ್ರ
ನಗರ ವ್ಯಾಪ್ತಿಯ ರುದ್ರಭೂಮಿ ಕಂಪೌಂಡ್ ಬಳಿ ನಿರ್ಮಿಸ ಲಾದ ನೀರು ಶುದ್ಧೀಕರಣ ಘಟಕದ ದುಸ್ಥಿತಿಯಿದು.
ಬಳ್ಳಾರಿಯ ಹರೀಶ್ಚಂದ್ರ ನಗರದಲ್ಲಿ ಕೂಲಿಕಾರ್ಮಿಕರು, ಶ್ರಮಿಕರು, ಬಡವರು ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಈ ಭಾಗದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಅನಿವಾರ್ಯತೆ ಇದೆ.‌ ಆದರೆ, ಕಾಯಿನ್ ಮೂಲಕ ನೀರನ್ನು ಕೊಡಪಾನಕ್ಕೆ ಹಿಡಿಯುವ ವ್ಯವಸ್ಥೆ ಮಾಡಲಾಗಿದೆಯಾದ್ರೂ, ಕಾಯಿನ್ ಬಾಕ್ಸ್ ನಲ್ಲಿ ಕಾಯಿನ್ ಹಾಕಿದರೆ ಕೆಲವೊಮ್ಮೆ ನೀರೇ ಬರೋದಿಲ್ಲ. ಈ ಕುರಿತು ಈ‌ ಟಿವಿ ಭಾರತ್ ರಿಯಾಲಿಟಿ ಚೆಕ್ ನಡೆಸಿದಾಗ, ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ.
ನೀರಿನ ದಾಹ ನೀಗಿಸದ ಶುದ್ಧೀಕರಣ ಘಟಕ: ನೀರಿನ ದಾಹವನ್ನೇ ನೀಗಿಸದ ಶುದ್ಧೀಕರಣ ಘಟಕಗಳು ಜಿಲ್ಲೆಯ ಬಹುತೇಕ ಕಡೆಗಳಲ್ಲಿವೆ. ಆ ಪೈಕಿ ಹರೀಶ್ಚಂದ್ರ ನಗರದಲ್ಲಿನ ಶುದ್ಧೀಕರಣ ಘಟಕವೇ ತಾಜಾ ಉದಾಹರಣೆಯಾಗಿದೆ.
ಐದು ರೂಪಾಯಿ ಕಾಯಿನ್ ಹಾಕಿದಾಗ, ಕೊಡಪಾನ ತುಂಬುವ ಷ್ಟಾದರೂ ಶುದ್ಧೀಕರಿಸಿದ ನೀರೇ ಬರೋದಿಲ್ಲ. ಒಮ್ಮೊಮ್ಮೆ ಘಟಕದೊಳಗೆ ಕಾಯಿನ್ ಸೇರಿಕೊಳ್ಳುತ್ತೆ. ಆದರೆ, ಕೊಡಪಾನ ದಲ್ಲಿ ನೀರೇ ಸಂಗ್ರಹವಾಗೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಶುದ್ಧೀಕರಣ ಘಟಕದ್ದಾಗಿದೆಂದು ಹರೀಶ್ಚಂದ್ರ ನಗರದ ನಿವಾಸಿ ಸುನೀಲ ಕುಮಾರ ದೂರುತ್ತಾರೆ.

Body:ಗ್ರಾಮೀಣ ಭಾಗದಲ್ಲೂ ಆರ್ ಒ ಪ್ಲಾಂಟ್ ಗಳಿಗೆ ಬಿಸಿ ತಟ್ಟಿದ ಬಿರುಬಿಸಿಲು: ಬಳ್ಳಾರಿ ನಗರ ಪ್ರದೇಶದ ಬಹುತೇಕ ಆರ್ ಒ ಪ್ಲಾಂಟ್ ಗಳ ಕಾರ್ಯವೈಖರಿಯೇ ಈ ರೀತಿಯಾದಾಗ, ಗ್ರಾಮೀಣ ಭಾಗದ ಆರ್ ಒ‌ ಪ್ಲಾಂಟ್ ಗಳ ಪರಿಸ್ಥಿತಿಯಂತೂ ಹೇಳತೀರದು.
ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತ ಕೇಂದ್ರೀತ ಸ್ಥಳದಲ್ಲಿಯೇ ಆರ್ ಒ ಪ್ಲಾಂಟ್ ಗಳ‌ ನಿರ್ವಹಣೆ ಬೇಕಾಬಿಟ್ಟಿಯಾಗಿದೆ. ಇನ್ನೂ ಗ್ರಾಮೀಣ ಪ್ರದೇಶದ ಆರ್ ಒ ಪ್ಲಾಂಟ್ ಗಳ ನಿರ್ವಹಣೆ ಯಕ್ಷಪ್ರಶ್ನೆ ಎದುರಾಗಿದೆ. ಗ್ರಾಮೀಣ ಕುಡಿಯುವ ನೀರು‌ ಪೂರೈಕೆ ಮತ್ತು ನೈರ್ಮಲ್ಯ ವಿಭಾಗದಿಂದ ಸರಿಸುಮಾರು 353 ಸ್ಥಾಪಿಸಲು ಉದ್ದೇಶಿಸಿದ್ದು, ಆ ಪೈಕಿ 26 ಪ್ರಗತಿಯ ಹಂತದಲ್ಲಿವೆ. 324 ಆರ್ ಒ ಪ್ಲಾಂಟ್ ಗಳು ಪೂರ್ಣಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಅನುವು‌ ಮಾಡಿಕೊಡಲಾಗಿದೆ. ಕೆಆರ್ ಐಡಿಎಲ್ ಅನುದಾನ ಅಡಿಯಲ್ಲಿ 146 ಆರ್ ಒ ಪ್ಲಾಂಟ್ ಗಳಲ್ಲಿ 142 ಆರ್ ಒ ಪ್ಲಾಂಟ್ ಗಳನ್ನು ಇನ್ ಸ್ಟಾಲ್ ಮಾಡಲಾಗಿದೆ. 134 ಆರ್ ಒ ಪ್ಲಾಂಟ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಇಲಾಖೆ ಅಂಕಿ- ಅಂಶಗಳು ಹೇಳುತ್ತವೆ.
ವಾಸ್ತವವಾಗಿ ಆರ್ ಒ ಪ್ಲಾಂಟ್ ಗಳು ಮಾತ್ರ‌ ಸಮರ್ಪಕವಾಗಿ ಬಳಕೆ ಆಗದಿರುವ ಅಂಶವು ಮೇಲ್ನೋಟಕ್ಕೆ ಕಂಡುಬರುತ್ತದೆ. ಬಹುತೇಕ ಆರ್ ಒ ಪ್ಲಾಂಟ್ ಗಳ‌ ನಿರ್ವಹಣೆ ಕೊರತೆಯಿಂದ‌ ಮುಚ್ಚಿಕೊಂಡಿವೆ. ಜಿಲ್ಲಾದ್ಯಂತ ಕುಡಿಯುವ ನೀರಿನ‌ ಬವಣೆ ಮಾತ್ರ ಸಮರ್ಪಕವಾಗಿ ನೀಗಿಲ್ಲ ಎಂಬುದು ಜಿಲ್ಲೆಯ ಆಯಾ ತಾಲೂಕಿನ ಗ್ರಾಮೀಣ ಜನರ ಗಂಭೀರ ಆರೋಪವಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_12_RO_PLANT_TROUBLE_7203310

KN_BLY_01a_12_RO_PLANT_TROUBLE_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.