ಬಳ್ಳಾರಿ: ಜಿಲ್ಲೆಯ ರೈತರ ಜೀವನಾಡಿ ಎಂದೇ ಖ್ಯಾತಿ ಹೊಂದಿದ ಹೊಸಪೇಟೆ ನಗರದ ತುಂಗಭದ್ರಾ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದೆ. ಅಂದಾಜು 20 ಕ್ರಸ್ಟ್ ಗೇಟ್ಗಳ ಮುಖೇನ 45,690 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
10 ಕ್ರಸ್ಟ್ ಗೇಟ್‍ನಲ್ಲಿ 1 ಅಡಿ ಮೂಲಕ ಹಾಗೂ 10 ಕ್ರಸ್ಟ್ ಗೇಟ್‍ನಲ್ಲಿ 2 ಅಡಿ ಮೂಲಕ ನದಿಗೆ ನೀರನ್ನು ಹರಿಸಲಾಗುತ್ತಿದೆ. ಜಲಾಶಯದಲ್ಲಿ 1,633.00 ಅಡಿ ನೀರಿದ್ದು, 100.855 ನೀರು ಸಂಗ್ರಹವಾಗಿದೆ.
ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು. ಜಲಾಶಯದ ಒಳಹರಿವು ಭಾರೀ ಪ್ರಮಾಣದಲ್ಲಿ ದಾಖಲಾಗುತ್ತಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಬೋಟ್ ಸಂಚಾರ ರದ್ದು:
ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ, ಬೋಟ್ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಅಲ್ಲದೇ, ಹಂಪಿಯ ಸ್ನಾನಗಟ್ಟ -ಕರ್ಮ ಮಂಟಪ, ಪುರಂದರ ದಾಸರ ಮಂಟಪವೂ ಕೂಡ ಸಂಪೂರ್ಣವಾಗಿ ಮುಳಗಡೆಯಾಗಿದೆ.
ವಿಜಯವಿಠಲ ದೇಗುಲಕ್ಕೆ ತೆರಳುವ ಕಾಲುದಾರಿ ಈ ನೀರಿನಿಂದ ಜಲಾವೃತಗೊಂಡಿದೆ. ಚಕ್ರತೀರ್ಥ ಕೋದಂಡರಾಮ ದೇಗುಲದ ಬಳಿ ಕೋಟಿಲಿಂಗ, ಚಂದ್ರಮೌಳೇಶ್ವರ, ಅನಂತ ಪದ್ಮನಾಭ, ಸೂರ್ಯ ದೇಗುಲಗಳಲ್ಲಿ ನೀರು ಹೊಕ್ಕಿದೆ.