ETV Bharat / state

ಕೋವಿಡ್ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಫಿವರ್ ಕ್ಲಿನಿಕ್​ಗೆ ಭೇಟಿ ಕೊಡಿ: ಡಿಹೆಚ್​ಒ - ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ದನ

ಕೋವಿಡ್ ಸೋಂಕಿನ ಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಫಿವರ್ ಕ್ಲಿನಿಕ್​ಗೆ ಭೇಟಿ ಕೊಡಿ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಎಲ್.ಜನಾರ್ದನ ಮನವಿ ಮಾಡಿದ್ದಾರೆ.

Bellary DHO
ಗುಣಲಕ್ಷಣ ಕಂಡುಬಂದಲ್ಲಿ ಕೂಡಲೇ ಫೀವರ್ ಕ್ಲಿನಿಕ್​ಗೆ ಭೇಟಿ ಕೊಡಿ
author img

By

Published : Sep 2, 2020, 12:15 PM IST

ಬಳ್ಳಾರಿ: ಜಿಲ್ಲೆಯಲ್ಲಿ ಯಾರಿಗಾದರೂ ಕೋವಿಡ್ ಸೋಂಕಿನ ಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಫಿವರ್ ಕ್ಲಿನಿಕ್​ಗೆ ಭೇಟಿ ಕೊಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಡಿಹೆಚ್​ಒ) ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಎಲ್.ಜನಾರ್ದನ ಮನವಿ ಮಾಡಿಕೊಂಡಿದ್ದಾರೆ.

ಬಳ್ಳಾರಿಯ ಡಿಹೆಚ್​ಒ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್ ಗುಣಲಕ್ಷಣಗಳಾದ ಜ್ವರ, ಕೆಮ್ಮು ಹಾಗೂ ನೆಗಡಿ ಕಂಡು ಬಂದರೆ ಕೂಡಲೇ ಹತ್ತಿರದ ಕೋವಿಡ್ ಫಿವರ್ ಕ್ಲಿನಿಕ್​ಗೆ ಭೇಟಿ ಕೊಟ್ಟು, ಟೆಸ್ಟ್ ಮಾಡಿಸಿಕೊಳ್ಳಿ. ಪಾಸಿಟಿವ್ ಬಂದರೆ ಹೋಂ ಐಸೋಲೇಷನ್ ಅಥವಾ ಸಾಂಸ್ಥಿಕ ಐಸೋಲೇಷನ್​ನಲ್ಲಿದ್ದುಕೊಂಡೇ ಬಹುಬೇಗನೆ ಗುಣಮುಖರಾಗಿ ಎಂದಿದ್ದಾರೆ.

ಡಾ. ಹೆಚ್.ಎಲ್.ಜನಾರ್ದನ, ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಂದ ದಿನಕ್ಕೆ ಹೆಚ್ಚಾಗುತ್ತಿರೋದಕ್ಕೆ ಸಾರ್ವಜನಿಕರು ಯಾವುದೇ ಭಯ ಹಾಗೂ ಆತಂಕಕ್ಕೆ ಒಳಪಡೋದು ಬೇಡ.‌ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೋವಿಡ್ ಸೋಂಕು ಪತ್ತೆಯಾಗೋ ಮುನ್ನವೇ ಮನೆ ಮನೆಗೆ ತೆರಳಿ ಟೆಸ್ಟ್ ಮಾಡಲಾಗುತ್ತಿದೆ. ಯಾರೂ ಕೂಡ ಈ ಕೋವಿಡ್ ಸೋಂಕಿಗೆ ಬಲಿಯಾಗಬಾರದೆಂಬುದು ಇದರ ಉದ್ದೇಶವಾಗಿದೆ. ಹೀಗಾಗಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಂತೆಯೇ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಈ ಮೊದಲು ಕೋವಿಡ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಶೇಕಡಾವಾರು ಹೆಚ್ಚಿತ್ತು.‌ ಯಾವಾಗ ನಾವು ಮುಂಜಾಗ್ರತೆ ವಹಿಸಿ ಹೆಚ್ಚೆಚ್ಚು ಟೆಸ್ಟ್​ ನಡೆಸಿದೆವೋ ಗಂಭೀರ ಸ್ವರೂಪದ ಕೋವಿಡ್ ಸೋಂಕಿತರನ್ನ ಗುರುತಿಸಿ ಸಕಾಲದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಲಾಯಿತು. ‌ಹಾಗೂ ಅವರನ್ನ ಪ್ರಾಣಾಪಾಯದಿಂದ ತಪ್ಪಿಸಲು ಸಹಕಾರಿಯಾಯಿತು. ಹೀಗಾಗಿ ಈಗ ಕೋವಿಡ್ ಸೋಂಕಿನಿಂದ ಬಲಿಯಾಗುವವರ ಸಂಖ್ಯೆ ಶೇ. 1.5ರಷ್ಟಿದೆ. ಈ ಮೊದಲು ಹೆಚ್ಚಿತ್ತು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.