ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕಿಗೆ ಲಸಿಕೆ ಪಡೆಯಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಪಿಡಿಒ, ಆರೋಗ್ಯಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರೇ ಮನಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೇಳಿದರೂ ಜನರು ಕ್ಯಾರೆ ಎನ್ನುತ್ತಿಲ್ಲ. ಯರಬಯನಹಳ್ಳಿ, ಸಿಡೆಗಲ್ಲು, ಶ್ರೀಕಂಠಾಪುರ ಕಸಾಪುರ,ಲಿಂಗನಹಳ್ಳಿ ತಾಂಡದಲ್ಲೂ ಜನ ಲಸಿಕೆ ಪಡೆಯೋಕೆ ಮುಂದೆ ಬರುತ್ತಿಲ್ಲ.
'ನಾವ್ ಆರಾಮ್ ಇದ್ದೀವಿ, ನಮಗ್ಯಾಕಬೇಕು ವ್ಯಾಕ್ಸಿನ್?'
ನೀವು ಏನೇ ಹೇಳಿದ್ರೂ ನಾವು ವ್ಯಾಕ್ಸಿನ್ ಪಡೆಯುವುದಿಲ್ಲ. ವ್ಯಾಕ್ಸಿನ್ ತಗೊಂಡ್ರೆ, ಪುರುಷತ್ವ ಹೋಗುತ್ತೆ, ಕೈ ಕಾಲು ಸ್ವಾಧೀನ ಕಳೆದುಕೊಳ್ಳುತ್ತೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಅವರನ್ನು ಮನವೊಲಿಸಲು ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ.