ವಿಜಯನಗರ: ಸರ್ಕಾರಿ ಶಾಲೆಯ ಮಕ್ಕಳು ಸೇವಿಸುವ ಮಧ್ಯಾಹ್ನನದ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ನಡೆದಿದೆ. ಬಿಸಿಯೂಟದಲ್ಲಿ ಹುಳಪತ್ತೆ ಹಿನ್ನೆಲೆ ತಟ್ಟೆ ಸಮೇತ ವಾರ್ಡ್ ಸಭೆಗೆ ಬಂದ ವಿದ್ಯಾರ್ಥಿಗಳು ಆಹಾರ ಧಾನ್ಯಗಳಲ್ಲಿ ಹುಳುಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.
ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆಹಾರ ಧಾನ್ಯಗಳನ್ನು ಶುಚಿಗೊಳಿಸಿ ಗುಣಮಟ್ಟದ ಆಹಾರ ಒದಗಿಸುವಂತೆ ಶಿಕ್ಷಕರನ್ನು ಹಾಗೂ ಬಿಸಿಯೂಟ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದ ವಾರ್ಡ್ ಸಭೆಯಲ್ಲಿ ಮಕ್ಕಳು ತಟ್ಟೆಯಲ್ಲಿದ್ದ ಹುಳುಗಳನ್ನ ಪ್ರದರ್ಶನ ಮಾಡಿದರು.
ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲೆಯ ಅಡುಗೆ ಸಿಬ್ಬಂದಿಯ ಮೇಲೆ ಗರಂಗೊಂಡರು. ತೊಗರಿ ಬೇಳೆ ಹಾಗೂ ಬಿಸಿಯೂಟ ತಯಾರಿಸುವ ಅಕ್ಕಿಯಲ್ಲಿ ನುಸಿ ಇರುವ ಧಾನ್ಯಗಳನ್ನು ಚೆಲ್ಲಿ, ಉತ್ತಮ ಆಹಾರ ಧಾನ್ಯಗಳನ್ನು ಮಕ್ಕಳಿಗೆ ನೀಡುವಂತೆ ಗ್ರಾ.ಪಂ ಅಧ್ಯಕ್ಷ ಕೆ.ರುದ್ರಪ್ಪ ಶಾಲಾ ಸಿಬ್ಬಂದಿಗೆ ತಾಕೀತು ಮಾಡಿದರು.
ಇದನ್ನೂ ಓದಿ: ಬಾತ್ ರೂಮ್ನಲ್ಲಿ ಯುವತಿಯರ ಅರೆನಗ್ನ ವಿಡಿಯೊ ಸೆರೆಹಿಡಿಯುತ್ತಿದ್ದ ವಿದ್ಯಾರ್ಥಿ ಬಂಧನ