ETV Bharat / state

ವಿಜಯನಗರ ಜಿಲ್ಲಾ ಕಚೇರಿ ಮೂಲ ಸೌಕರ್ಯಕ್ಕಾಗಿ 68 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ

ಜಿಲ್ಲಾ ಕಚೇರಿ ಮೂಲ ಸೌಕರ್ಯಗಳಿಗಾಗಿ ಈಗಾಗಲೇ 68 ಕೋಟಿ ರೂ.ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ದಾರೆ.

ವಿಜಯನಗರ ಜಿಲ್ಲಾ ವಿಶೇಷಧಿಕಾರಿ ಅನಿರುದ್ಧ ಶ್ರವಣ್ ಭೇಟಿ

author img

By

Published : Jul 6, 2021, 3:48 PM IST

ಹೊಸಪೇಟೆ: ಜಿಲ್ಲಾ ಕಚೇರಿ ಮಾಡಲು ಉದ್ದೇಶಿಸಿರುವ ನಗರದ ತುಂಗಭದ್ರಾ ಸ್ಟೀಲ್ ಪ್ರೋಡೆಕ್ಟ್(ಟಿಎಸ್ಪಿ) ಕಟ್ಟಡಕ್ಕೆ ವಿಜಯನಗರ ಜಿಲ್ಲಾ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಟ್ಟಡ ಕೆಲಸದ ಕುರಿತು ಮಾಹಿತಿ ಪಡೆದುಕೊಂಡರು.

ವಿಜಯನಗರ ಜಿಲ್ಲಾ ವಿಶೇಷಧಿಕಾರಿ ಅನಿರುದ್ಧ ಶ್ರವಣ್ ಭೇಟಿ

ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಂದು ವಾರದೊಳಗೆ ಕಟ್ಟಡಗಳನ್ನು ಎಲ್ಲಿ ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಲಾಗುವುದು. ಈ ನಿಟ್ಟಿನಲ್ಲಿ ಸರಕಾರದ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಈಗಾಗಲೇ ಒಂದು ಸಭೆ ನಡೆದಿದೆ. ಸರಕಾರ ಹಂತ ಹಂತವಾಗಿ ಪರಿಶೀಲನೆ ನಡೆಸಿ, ಅನುದಾನ ಒದಗಿಸಲಾಗುವುದು ಎಂದು ತಿಳಿಸಿದೆ. ಜುಲೈ ತಿಂಗಳೊಳಗೆ ಕೆಲಸಗಳಿಗೆ ಅನುಮೋದನೆ ಸಿಗಲಿದೆ ಎಂದು ಹೇಳಿದರು.

ಕಚೇರಿ, ಕ್ರೀಡಾಂಗಣ ಸೇರಿದಂತೆ ಜಿಲ್ಲಾ ಕೇಂದ್ರಕ್ಕೆ ಏನೇನು ಬೇಕೆಂಬುದರ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಎರಡನೇ ಹಂತದಲ್ಲಿ ಕೆಲ ಅನುಮೋದನೆ ಸಿಗಲಿದೆ. 30 ಇಲಾಖೆಗಳಿದ್ದು, 60 ಕಚೇರಿಗಳು ಬೇಕಾಗುತ್ತವೆ ಎಂದರು.

ಜಿಲ್ಲಾ ಆಸ್ಪತ್ರೆಗೆ ನಿರ್ಮಾಣಕ್ಕಾಗಿ ಡಿಎಂಎಫ್ ಫಂಡ್‌ನಲ್ಲಿ ನಿರ್ಮಾಣ ಮಾಡಲು ಈಗಾಗಲೇ ಕೆಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ವಿಜಯನಗರ ಜಿಲ್ಲೆ ಈಗಾಗಲೇ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲದೇ, ಗಡಿ ರೇಖೆಗಳನ್ನು ಗುರುತಿಸಲಾಗಿದೆ. ಕಚೇರಿಗಳು ನಿರ್ಮಾಣವಾಗಬೇಕಾಗುತ್ತದೆ. ಆದಷ್ಟು ಬೇಗ ಎಲ್ಲಾ ಕಾರ್ಯಗಳಿಗೆ ಚಾಲನೆ ಸಿಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿಲ್ಲ: ಕಾವೇರಿ ನೀರಾವರಿ ಅಧೀಕ್ಷಕ ಅಭಿಯಂತರ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.