ETV Bharat / state

ಕೋವಿಡ್ ಸೋಂಕಿತರಲ್ಲದ ರೋಗಿಗಳಿಗೂ ಸಿಗಲಿದೆ ವೆಂಟಿಲೇಟರ್ ವ್ಯವಸ್ಥೆ: ಡಿಸಿ ನಕುಲ್

ಕೋವಿಡ್ ಸೋಂಕಿತರಲ್ಲದವರಿಗೂ ಕೂಡ ಈ ವೆಂಟಿಲೇಟರ್ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

Bellary
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
author img

By

Published : Aug 11, 2020, 6:22 PM IST

ಬಳ್ಳಾರಿ: ಜಿಲ್ಲೆಯಾದ್ಯಂತ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಡ್​ಗಳ ಕೊರತೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದೆ.‌ ಇನ್ಮುಂದೆ ಕೋವಿಡ್ ಸೋಂಕಿತರಲ್ಲದ ರೋಗಿಗಳಿಗೂ ಕೂಡ ಈ ವೆಂಟಿಲೇಟರ್ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್

ಜಿಲ್ಲೆಯ ಡಿಸಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿತರಿಗೆ ಯಾವುದೇ ಬೆಡ್ ಹಾಗೂ ವೆಂಟಿಲೇಟರ್ ಕೊರತೆಯಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಲಾಗಿದೆ. ಇದಲ್ಲದೇ, ಈ ದಿನ ರಾಜ್ಯ ಸರ್ಕಾರದಿಂದ ಬರುವ ಅಂದಾಜು 25 ಹೊಸ ವೆಂಟಿಲೇಟರ್​ಗಳನ್ನು ನಾನ್ ಕೋವಿಡ್ ರೋಗಿಗಳಿಗೆ ಬಳಸಲು ಚಿಂತನೆ ನಡೆಸಲಾಗಿದೆ. ಬಳ್ಳಾರಿಯ ವಿಮ್ಸ್ ಮತ್ತು ಡೆಂಟಲ್ ಕಾಲೇಜಿನಲ್ಲಿ ಈ ನಾನ್ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಅಗತ್ಯ ಬೆಡ್​ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಅಜೀಂ ಪ್ರೇಮ್​ಜಿ ಫೌಂಡೇಶನ್ ಹಾಗೂ ಪ್ರಧಾನಮಂತ್ರಿ ನಿಧಿಯಡಿ ಈ ಹೆಚ್​ಎನ್​ಎಸ್​ಓ ಯಂತ್ರೋಪಕರಣಗಳನ್ನು‌ ಖರೀದಿಸಲಾಗುತ್ತಿದೆ. ಕೋವಿಡ್ ಸೋಂಕಿತರ ತುರ್ತು ಚಿಕಿತ್ಸೆ ಸಲುವಾಗಿಯೇ ಈಗಾಗಲೇ ವೆಂಟಿಲೇಟರ್​ಗಳ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ ಎಂದರು. ಬಳ್ಳಾರಿ ಮತ್ತು ಹೊಸಪೇಟೆ ತಾಲೂಕಿನಲ್ಲಿ ಸೂಕ್ತ ಬೆಡ್​ಗಳ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ವೆಂಟಿಲೇಟರ್​ಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಂದಾಜು 119 ವೈದ್ಯರು ಕೋವಿಡ್ ಸೋಂಕಿಗೆ ಗುರಿ:

ಜಿಲ್ಲೆಯ ಅಂದಾಜು 119 ಮಂದಿ ಮಹಾಮಾರಿ ಈ ಕೋವಿಡ್ ಸೋಂಕಿಗೆ ಗುರಿಯಾಗಿದ್ದಾರೆ. ಆ ಪೈಕಿ ಕೆಲವರು ಹೋಂ ಐಸೋಲೇಷನ್ ಪೂರ್ಣಗೊಳಿಸಿ ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.