ETV Bharat / state

ಕಾಲೇಜು ಆರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದ ಬಳ್ಳಾರಿ ಶಿಕ್ಷಣ ಇಲಾಖೆ - ಪದವಿಪೂರ್ವ ಶಿಕ್ಷಣ ಇಲಾಖೆ

2020-21ನೇ ಸಾಲಿನ ಶೈಕ್ಷಣಿಕ ಅವಧಿಯು ಕೋವಿಡ್-19ರ ವಿಷಮ ಸ್ಥಿತಿಯಿಂದ ಇಲ್ಲಿಯವರೆಗೆ ಪ್ರಾರಂಭವಾಗಿರುವುದಿಲ್ಲ. ಈ ಕೆಳಕಂಡ ನಿಯಂತ್ರಣ ಕ್ರಮಗಳನ್ನು ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಕಡ್ಡಾಯವಾಗಿ ಅನುಸರಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ಅವರು ತಿಳಿಸಿದ್ದಾರೆ.

undergraduate-colleges-following-corona-control-measures
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ
author img

By

Published : Dec 27, 2020, 3:48 PM IST

ಬಳ್ಳಾರಿ: ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಕಡ್ಡಾಯವಾಗಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ಅವರು ತಿಳಿಸಿದ್ದಾರೆ.

undergraduate-colleges-following-corona-control-measures
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ

ನಿಯಂತ್ರಣ ಕ್ರಮಗಳು:

* ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ತರಗತಿ, ಪ್ರಾಂಶುಪಾಲ, ಉಪನ್ಯಾಸಕರು, ಪ್ರಯೋಗಾಲಯ ಹಾಗೂ ಶೌಚಾಲಯ ಕೊಠಡಿಗಳನ್ನು ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ, ಬ್ಲೀಚಿಂಗ್ ಪೌಡರ್, ಫಿನಾಯಿಲ್​ನಿಂದ ಸ್ವಚ್ಛ ಮಾಡಿಸುವುದು.

* ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆಯುವುದು. ಅನಾರೋಗ್ಯಕ್ಕೆ ತುತ್ತಾಗಿರುವ ವಿದ್ಯಾರ್ಥಿಗಳು ತರಗತಿಗಳಿಗೆ ಬರುವುದನ್ನು ನಿರ್ಬಂಧಿಸುವುದು.

* ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ಆನ್​​ಲೈನ್ ತರಗತಿಗಳು ಯಥಾ ರೀತಿ ಮುಂದುವರೆಯುತ್ತವೆ. ಪ್ರತಿ ದಿನವೂ 45 ನಿಮಿಷಗಳ 4 ತರಗತಿಗಳನ್ನು ಮಾತ್ರ ನಡೆಸುವುದು. ಮಾಸ್ಕ್ ಮತ್ತು ಕುಡಿಯುವ ನೀರಿನ ಬಾಟಲ್‌ಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳೇ ತರಬೇಕು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪ್ರತಿ ದಿನ ಪರೀಕ್ಷೆ ಮಾಡುವುದು.

ಓದಿ: ಪ್ರಥಮ - ದ್ವಿತೀಯ ಪಿಯುಸಿ ದಾಖಲಾತಿ ಮತ್ತು ಕಾಲೇಜು ಪ್ರಾರಂಭದ ದಿನಾಂಕ ವಿಸ್ತರಣೆ

* ಪ್ರತಿ 10 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರನ್ನು ಮಾರ್ಗದರ್ಶಕರಾಗಿ ನೇಮಕ ಮಾಡುವುದು. ಕನಿಷ್ಠ 06 ಅಡಿಗಳ ಅಂತರವನ್ನು ಕಾಪಾಡುವುದು (ತರಗತಿಯ ಒಳಗೆ ಹಾಗೂ ಹೊರಗೆ). ಎಲ್ಲೆಂದರಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸುವುದು.

* ಕೆಮ್ಮುವಾಗ ಮತ್ತು ಸೀನುವಾಗ ಮುಖಕ್ಕೆ ಕರವಸ್ತ್ರ, ಟಿಶ್ಯು ಪೇಪರ್, ಮೊಣಕೈಯನ್ನು ಅಡ್ಡ ಹಿಡಿಯಲು ತಿಳಿಸುವುದು. ಆರೋಗ್ಯ ಸೇತು ಆ್ಯಪ್‌ಗಳನ್ನು ಅಳವಡಿಸಿಕೊಂಡು ಬಳಸುವುದನ್ನು ತಿಳಿಸುವುದು. ಪ್ರತಿ ಕಾಲೇಜಿನಲ್ಲಿ ಪ್ರತ್ಯೇಕವಾಗಿ ಒಂದು ಐಸೋಲೇಶನ್ ಕೊಠಡಿಯನ್ನು ಕಾಯ್ದಿರಿಸುವುದು ಮತ್ತು ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯನ್ನು ಈ ಕೊಠಡಿಯಲ್ಲಿ ನಿಗಾವಣೆಗೆ ಇರಿಸಿ, ಸದರಿ ಮಾಹಿತಿಯನ್ನು ಪೋಷಕರಿಗೆ ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸುವುದು.

* ಒಂದು ತರಗತಿಯಲ್ಲಿ ಕೇವಲ 15 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುವುದು. ಕೊಠಡಿಯ ವಿಸ್ತೀರ್ಣಕ್ಕೆ ಹಾಗೂ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಪಡಿಸಿಕೊಳ್ಳುವುದು.

* ಶೌಚಾಲಯವನ್ನು ಕಡ್ಡಾಯವಾಗಿ ಶುಚಿಗೊಳಿಸುತ್ತಿರುವುದು ಮತ್ತು ಸಾಕಷ್ಟು ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು. ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳು ಇದ್ದಲ್ಲಿ, ಬೆಳಗಿನ ಮತ್ತು ಮಧ್ಯಾಹ್ನದ ಅವಧಿಗಳನ್ನು ತೆಗೆದುಕೊಳ್ಳಲು ವೇಳಾ ಪಟ್ಟಿಯನ್ನು ರೂಪಿಸಿಕೊಳ್ಳುವುದು.

ಉದಾ: ಬೆಳಗ್ಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಹಾಗೂ ಮಧ್ಯಾಹ್ನದ ಅವಧಿಯಲ್ಲಿ ವಿಜ್ಞಾನ ವಿಭಾಗ ಅಥವಾ ಬೆಳಗ್ಗೆ ವಿಜ್ಞಾನ ವಿಭಾಗ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ನಡೆಸುವುದು.

* ಖಾಸಗಿ ಪದವಿ ಪೂರ್ವ ಕಾಲೇಜುಗಳ ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರುವಾಗ ಹಾಗೂ ತೆರಳುವಾಗ ಸಾಮಾಜಿಕ ಅಂತರವನ್ನು ಕಾಪಾಡುವುದು. ಪ್ರಾರ್ಥನೆ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆಗಳನ್ನು ಸಾಮೂಹಿಕವಾಗಿ ಕೈಗೊಳ್ಳುವಂತಿಲ್ಲ.

* 51 ವರ್ಷ ಮೇಲ್ಪಟ್ಟ ವಯಸ್ಸಿನ ಉಪನ್ಯಾಸಕರು ಫೇಸ್ ಮಾಸ್ಕ್, ಫೇಸ್ ಗ್ಲೌಸ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ಹತ್ತಿರದ ಆರೋಗ್ಯ ಕೇಂದ್ರಗಳ ದೂರವಾಣಿ ಸಂಖ್ಯೆ, ಮೊಬೈಲ್ ಸಂಖ್ಯೆಗಳನ್ನು ಕಾಲೇಜಿನ ನೊಟೀಸ್ ಬೋರ್ಡ್ ಗೆ ಪ್ರಕಟಿಸುವುದು ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.