ಹೊಸಪೇಟೆ: ಹಂಪಿಯ ವಿರೂಪಾಕ್ಷೇಶ್ವರ ಸಾಲುಮಂಟಪದ ರಥ ಬೀದಿಯಲ್ಲಿ ಆಂಧ್ರ ಪ್ರದೇಶ ಮೂಲದ ಸಹೋದರಿಯರಿಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೀನಾಕ್ಷಮ್ಮ(52), ಕಮಲಮ್ಮ(50) ಆತ್ಮಹತ್ಯೆ ಮಾಡಿಕೊಂಡವರು. ನ.28 ರಂದು ಮನೆ ಬಿಟ್ಟು ಬಂದಿದ್ದಾರೆ. ಸಾಲು ಮಂಟಪದಲ್ಲಿ ಹಲವು ಗಂಟೆಗಳ ಕಾಲ ಮಲಗಿದ್ದಾರೆ. ಇದರಿಂದ ಎಎಎಸ್ಐ ಗೈಡ್ ಮಹಿಳೆಯರನ್ನು ಎಬ್ಬಿಸಲು ಹೋಗಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.