ETV Bharat / state

ಕೂಡ್ಲಿಗಿ: ಸಾರಿಗೆ ಬಸ್​-ಆಟೋ ಡಿಕ್ಕಿ, ಇಬ್ಬರು ಸಾವು, ನಾಲ್ವರು ಗಂಭೀರ

author img

By

Published : Jun 22, 2022, 8:11 PM IST

ದಾವಣಗೆರೆಯಿಂದ ಕೂಡ್ಲಿಗಿ ಮಾರ್ಗವಾಗಿ ಬಳ್ಳಾರಿ ಕಡೆ ಹೊರಟಿದ್ದ ಸಾರಿಗೆ ಬಸ್ಸಿನ ಮುಂಭಾಗದ ಟೈರ್ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಎದುರಿಗೆ ಬರುತ್ತಿದ್ದ ಈಚಲಬೊಮ್ಮನಹಳ್ಳಿ ಕಡೆ ಹೊರಟಿದ್ದ ಆಟೋಗೆ ಡಿಕ್ಕಿ ಹೊಡೆಯಿತು.

ಸಾರಿಗೆ ಬಸ್​- ಆಟೋ ಮುಖಾಮುಖಿ ಡಿಕ್ಕಿ : ಇಬ್ಬರು ಸಾವು. ನಾಲ್ಕು ಜನ ಗಂಭೀರ

ವಿಜಯನಗರ: ಸಾರಿಗೆ ಬಸ್​ ಮತ್ತು ಆಟೋ ಮುಖಾಮುಖಿ ಡಿಕ್ಕಿ ಹೊಡೆದು ಆಟೋದಲ್ಲಿದ್ದ ಇಬ್ಬರು ಮೃತಪಟ್ಟು ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ಕೂಡ್ಲಿಗಿ ತಾಲೂಕಿನ ಕುಪ್ಪಿನಕೆರೆ ಕ್ರಾಸ್ ಬಳಿ ನಡೆದಿದೆ.

ಕೂಡ್ಲಿಗಿ ಎಸ್​​ಎವಿಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಈಚಲಬೊಮ್ಮನಹಳ್ಳಿಯ ಪುಷ್ಪಾಲತಾ (20) ಗಂಭೀರವಾಗಿ ಗಾಯಗೊಂಡು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಅಪಘಾತ ಸ್ಥಳದಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದ ಮೀನಾಕ್ಷಿ (38) ಎಂಬವರನ್ನು ಬಳ್ಳಾರಿಯ ವಿಮ್ಸ್‌ಗೆ ಕರೆದೊಯ್ಯುವಾಗ ರಾಂಪುರ ಹತ್ತಿರದ ಮಾರ್ಗಮಧ್ಯೆ ಮೃತಪಟ್ಟರು.

ರಮೇಶ (28), ಗೌಡ್ರು ಈರಣ್ಣ (65), ಅಭಿಷೇಕ್ (20) ಗಾಯಗೊಂಡವರು. ಇವರನ್ನು ವಿಮ್ಸ್‌ಗೆ ದಾಖಲಿಸಲಾಗಿದೆ. ಮತ್ತೋರ್ವ ವಿದ್ಯಾರ್ಥಿನಿ ಸ್ವಾತಿ (19) ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾವಣಗೆರೆಯಿಂದ ಕೂಡ್ಲಿಗಿ ಮಾರ್ಗವಾಗಿ ಬಳ್ಳಾರಿ ಕಡೆ ಹೊರಟಿದ್ದ ಸಾರಿಗೆ ಬಸ್ ಮುಂಭಾಗದ ಟೈರ್ ಸ್ಫೋಟಗೊಂಡಿದೆ. ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್‌ ಎದುರಿಗೆ ಬರುತ್ತಿದ್ದ ಈಚಲಬೊಮ್ಮನಹಳ್ಳಿ ಕಡೆ ಹೊರಟಿದ್ದ ಆಟೋಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಘಟಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಟ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ ಐಂದ್ರಿತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.