ETV Bharat / state

ಲಾರಿ-ಬೈಕ್​ನಡುವೆ ಅಪಘಾತ: ಇಬ್ಬರ ಸಾವು - accident at Bellary

ಬಲ್ಕುಂದಿ ಗ್ರಾಮದಿಂದ ಹರಿವಾಣದ ಕಡೆಗೆ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ, ಆದೋನಿಯಿಂದ ಸಿರುಗುಪ್ಪಾ ನಗರದ ಕಡೆ ಬರುತ್ತಿದ್ದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

kn_01_bly_270720_accident_news_ka10007
ಲಾರಿ_ಬೈಕ್​ನಡುವೆ ಅಪಘಾತ
author img

By

Published : Jul 28, 2020, 12:47 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅರಳಿಗನೂರು ಕ್ರಾಸ್ ಬಳಿ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮಹಿಳೆ ಮತ್ತು ಓರ್ವ ಪುರುಷ ಸಾವಿಗೀಡಾಗಿದ್ದಾರೆ.

ಗಂಗಾಧರ (36) ಸಾವಿಗೀಡಾದವ. ಮಹಿಳೆಯ ಹೆಸರು ತಿಳಿದುಬಂದಿಲ್ಲ. ಬಲ್ಕುಂದಿ ಗ್ರಾಮದಿಂದ ಹರಿವಾಣದ ಕಡೆಗೆ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ, ಆದೋನಿಯಿಂದ ಸಿರುಗುಪ್ಪಾ ನಗರದ ಕಡೆ ಬರುುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.

ಲಾರಿಯ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಸಿರುಗುಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.