ಬಳ್ಳಾರಿ: ಕೋವಿಡ್-19 ಸೋಂಕು ತಗುಲಿದ್ದ ಹೊಸಪೇಟೆ ಮೂಲದ ಇಬ್ಬರು ಯುವಕರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಅವರನ್ನು ಬೀಳ್ಕೊಡಲಾಗಿದೆ.
ಸತತವಾಗಿ 14 ದಿನಗಳ ಕಾಲ ಐಸೊಲೇಷನ್ನಲ್ಲಿ ಇದ್ದು, ಚಿಕಿತ್ಸೆ ಪಡೆದು ಗುಣಮುಖರಾದ ಪಿ-333 ಹಾಗೂ ಪಿ-337 ಸಂಖ್ಯೆಯ ಇಬ್ಬರಿಗೂ ಜಿಲ್ಲಾ ಸರ್ಕಾರಿ ಕೋವಿಡ್-19 ಅಸ್ಪತ್ರೆಯಿಂದ ಚಪ್ಪಾಳೆ ತಟ್ಟುವ ಮುಖೇನ ಅವರಿಬ್ಬರನ್ನು ಬೀಳ್ಕೊಡಲಾಯಿತು.
ಇದುವರೆಗೂ ಬಳ್ಳಾರಿಯಲ್ಲಿ ಏಳು ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದು, ಇದೀಗ ಕೇವಲ ಆರು ಮಂದಿ ಮಾತ್ರ ಐಸೊಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ 13 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ.