ಬಳ್ಳಾರಿ: ರೈಲು ಮಾದರಿಯ ಬಸ್ನಲ್ಲಿ ಕುಳಿತು ವಿಶ್ವ ವಿಖ್ಯಾತ ಹಂಪಿ ಶಿಲ್ಪಕಲಾ ಸ್ಮಾರಕಗಳನ್ನುವೀಕ್ಷಣೆ ಮಾಡುವ ಹಂಪಿ ಆನ್ ವೀಲ್ಸ್ ಯೋಜನೆಯನ್ನು ಕಾರ್ಯಾರಂಭ ಮಾಡಿದೆ.
ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಪ್ರಿವಿಲೆಲ್ಸ್ ಗ್ರೀನ್ ಸಲ್ಯೂಷನ್ ಪ್ರಿ.ಲಿ ಸಂಸ್ಥೆ ಜಂಟಿಯಾಗಿ ಈ ಯೋಜನೆ ಅನುಷ್ಠಾನಕ್ಕೆ ತಂದಿದೆ. 18 ವರ್ಷ ಮೇಲ್ಪಟ್ಟವರಿಗೆ 354 ರೂ, 175 ರೂ. 8ರಿಂದ 17 ವರ್ಷದೊಳಗಿನವರಿಗೆ ಅರ್ಧ ಟಿಕೆಟ್ ನಿಗದಿ ಪಡಿಸಿದೆ.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಥ ಬೀದಿಯಿಂದ ವಾಹನ ಸಂಚರಿಸಲಿದೆ. ರೈಲು ಮಾದರಿಯ ಬಸ್ ಎರಡು ಬೋಗಿಯಿಂದ ವಿನ್ಯಾಸಗೊಳಿಸಲಾಗಿದೆ. ಇದು ಡೀಸೆಲ್ ಇಂಧನದಿಂದ ಓಡುತ್ತದೆ. ಒಂದು ಬೋಗಿಯಲ್ಲಿ 8 ಪ್ರಯಾಣಿಕರು, ಇನ್ನೊಂದು ಬೋಗಿಯಲ್ಲಿ 12 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ಸ್ಮಾರಕದ ಮಾಹಿತಿ ನೀಡಲು ಓರ್ವ ಮಾರ್ಗದರ್ಶಿ ಇರುತ್ತಾರೆ.
ಓದಿ: ಸಚಿವ ಸಂಪುಟ ರಚನೆ ಸರ್ಕಸ್...ಜೆಪಿ ನಡ್ಡಾ ಭೇಟಿ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ
ಕೋವಿಡ್ ಕಾರಣದಿಂದ ಈ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಈಗ ಟಿಕೆಟ್ನೊಂದಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ತಕ್ಕಂತೆ ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ವಿಶ್ವ ವಿಖ್ಯಾತ ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಮಾಹಿತಿ ನೀಡಿದರು.