ಬಳ್ಳಾರಿ: ನಗರ ಮತ್ತು ಗ್ರಾಮೀಣ ಪ್ರದೇಶದಿಂದ ನೂರಾರು ಪ್ರವಾಸಿಗರು ಮಿಂಚೇರಿ ಗುಡ್ಡ ನೋಡಲು ಬೆಳಗಿನ ಸಮಯದಲ್ಲಿ ಅತಿ ಹೆಚ್ಚಾಗಿ ಬರುತ್ತಿದ್ದಾರೆ. ಇಲ್ಲಿಗೆ ಬಂದವರು ಫೋಟೋ ತೆಗೆದುಕೊಂಡು ಸಖತ್ ಎಂಜಾಯ್ ಕೂಡ ಮಾಡುತ್ತಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರವಾಸಿಗ ಗಗನ್ ದೀಪ್ ಅವರು, ಬಳ್ಳಾರಿಯಲ್ಲಿ ಮಿಂಚೇರಿ ಅಂತ ಸ್ಥಳವಿದೆ ಎಂದು ಸಹ ತಿಳಿದಿರಲಿಲ್ಲ. ಸ್ನೇಹಿತ ಹೇಳಿದ್ದಕ್ಕಾಗಿ ಇಲ್ಲಿಗೆ ಬಂದೆವು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋರಟು ಈ ಸ್ಥಳಕ್ಕೆ ಆಗಮಿಸಿ ನೋಡಿದರೆ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶವಾಗಿದೆ. ಬಹಳ ಸಂತೋಷವಾಗುತ್ತಿದೆ. ಅಲ್ಲದೇ ಇದು ಸಾಕಷ್ಟು ಸಾರ್ವಜನಿಕರು ಬಂದು ನೋಡುವ ಸ್ಥಳವಾಗಿದೆ ಎಂದರು.
ನಂತರ ಪ್ರವಾಸಿಗ ಬಿ. ಪಾಲಾಕ್ಷ ಮಾತನಾಡಿ, ಈ ಪ್ರದೇಶ ಉತ್ತಮವಾದ ಪರಿಸರದಿಂದ ಕೂಡಿದೆ. ಆದ್ರೆ ಅಗತ್ಯ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ಒದಗಿಸಿದರೆ ಉತ್ತಮವಾಗಿರುತ್ತದೆ ಎಂದರು.