ಬಳ್ಳಾರಿ : ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯತ್ನ ಶಂಕರಬಂಡೆ (ತೊಲಮಾಮಿಡಿ) ಕ್ಷೇತ್ರದ ಮತಪತ್ರದಲ್ಲಿ ಚಿಹ್ನೆ ಬದಲಾವಣೆಯಾಗಿರುವ ಹಿನ್ನೆಲೆ ಮರುಮತದಾನವನ್ನು ಇಂದು ನಡೆಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಡಿ.22 ರಂದು ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾ.ಪಂ. ಶಂಕರಬಂಡೆ ಕ್ಷೇತ್ರದ ಮತಪತ್ರದಲ್ಲಿ ಚಿಹ್ನೆ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಅಂದು ನಡೆದ ಮತದಾನವನ್ನು ಅಸಿಂಧುವೆಂದು ಘೋಷಿಸಿ ಇಂದು ಮರು ಮತದಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣ : ಇದಕ್ಕೆ ಕಾರಣ ಏನ್ ಗೊತ್ತಾ ?
ಸದರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಮತಗಟ್ಟೆ ಸಂ.163 ಮತ್ತು 163ಎ ರಲ್ಲಿನ ಮತದಾರರು ಮಾತ್ರ ಇಂದು ತಪ್ಪದೇ ಕೋವಿಡ್ -19 ನಿಯಮವನ್ನು ಉಲ್ಲಂಘಿಸದಂತೆ ಮತ ಚಲಾಯಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.