ಬಳ್ಳಾರಿ: ಕಳ್ಳತನ ಪ್ರಕರಣದ ಆರೋಪಿಯನ್ನು ಗಾಂಧಿನಗರ ಠಾಣೆಯ ಪೊಲೀಸರು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೋಮಶೇಖರ ಬಂಧಿತ ಆರೋಪಿ. ಇನ್ಸ್ಪೆಕ್ಟರ್ ಆರ್. ಗಾಯತ್ರಿ ನೇತೃತ್ವದ ಗಾಂಧಿನಗರ ಪೊಲೀಸ್ ತಂಡ ಬಳ್ಳಾರಿಯ ಕೆಎಚ್ಬಿ ಕಾಲೊನಿಯಲ್ಲಿ ಕಳ್ಳನನ್ನು ಬಂಧಿಸಿದೆ. ಆರೋಪಿಯಿಂದ ಪೊಲೀಸರು ಅಂದಾಜು ₹ 2.40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.