ಬಳ್ಳಾರಿ: ಮೊಮ್ಮಗನ ನಾಮಕರಣಕ್ಕಾಗಿ 10 ದಿನಗಳ ಕಾಲ ಊರಿಗೆ ಹೋದಾಗ ಕಳ್ಳರು ಮನೆ ಚೀಲಕ ಮುರಿದು ಬೀರುವಿನಲ್ಲಿದ್ದ ಬಂಗಾರ, ಬೆಳ್ಳಿ, ನಗದು ಕದ್ದು ಪರಾರಿಯಾದ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ.
ನಗರದ ಕೌಲ್ ಬಜಾರ್ ಪ್ರದೇಶದ ಬ್ಲೂಮನ್ ಐಸ್ ಕ್ರೀಂ ಫ್ಯಾಕ್ಟರಿಯ ಹತ್ತಿರದ ನಾಗರತ್ನ ಅವರ ಮನೆಯಲ್ಲಿ ಕಳ್ಳತವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕಪಾಟಿನ ಬೀಗ ಮುರಿದು ಅದರಲ್ಲಿದ್ದ 56 ಗ್ರಾಂ ಚಿನ್ನ (ಮೌಲ್ಯ 1,28,800 ರೂಪಾಯಿ), 545 ಗ್ರಾಂ ಬೆಳ್ಳಿ ( ಮೌಲ್ಯದ 16,350 ರೂಪಾಯಿ) ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.