ಬಳ್ಳಾರಿ: ಇಲ್ಲಿನ 7ನೇ ವಾರ್ಡ್ನ ಬಾಪೂಜಿ ನಗರದಲ್ಲಿ ರಾಜಕಾಲುವೆ ಹರಿದು ಹೋಗುತ್ತೆ. ಆದ್ರೆ ಈ ಕಾಲುವೆಯಲ್ಲಿ ಪ್ಲಾಸ್ಟಿಕ್ ಮತ್ತು ಕಸದ ರಾಶಿಯಾಗಿ ತುಂಬಿಕೊಂಡು ದುರ್ನಾತ ಬೀರುತ್ತಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ನಗರಸಭೆಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲವಂತೆ.
ಈ ರೀತಿಯ ರಾಶಿ ರಾಶಿ ಕಸ, ಪ್ಲಾಸ್ಟಿಕ್ ಸಂಗ್ರಹಣೆ ಆಗುವುದರಿಂದ ಈ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗಗಳು, ವಿಪರೀತ ಸೊಳ್ಳೆ, ನೊಣಗಳ ಕಾಟದಿಂದ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬದುಕುವಂತಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸದಸ್ಯರು ಇಂಜಿನಿಯರ್ಳು ಕಸದರಾಶಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಡು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.